LATEST NEWS
ಸಂಡೇ ಲಾಕ್ ಡೌನ್ ; ದಕ್ಷಿಣಕನ್ನಡ ಜಿಲ್ಲೆ ಸಂಪೂರ್ಣ ಸ್ತಬ್ದ

ಮಂಗಳೂರು ಜುಲೈ 12: ಕೊರೊನಾ ಮುಂಜಾಗೃತಾ ಕ್ರಮವಾಗಿ ರಾಜ್ಯ ಸರಕಾರ ಹೇರಿರುವ ಸಂಡೆ ಲಾಕ್ ಡೌನ್ ಕಾರಣದಿಂದ ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಗಿ ಕರ್ಫ್ಯೂ ಜಾರಿ ಮಾಡಲಾಗಿದೆ. ಎರಡನೇ ಹಂತದ ವೀಕೆಂಡ್ ಲಾಕ್ ಡೌನ್ ಇದಾಗಿದ್ದು, ಅಗತ್ಯ ಸೇವೆ ಹೊರತು ಪಡಿಸಿ ಎಲ್ಲಾ ರೀತಿಯ ಸೇವೆಗಳು ಇಂದು ಬಂದ್ ಆಗಿದೆ. ಕಳೆದ ಭಾನುವಾರದಂತೆ ಈ ಭಾನುವಾರವು ಮಂಗಳೂರು ಸ್ತಬ್ಧವಾಗಿದೆ.
ಮಾರುಕಟ್ಟೆ, ಅಂಗಡಿಗಳು ಮುಚ್ಚಿದ್ದರಿಂದ ಮಂಗಳೂರು ನಿರ್ಜನವಾಗಿದ್ದು ಹಾಲಿನ ಅಂಗಡಿಗಳು, ಮೆಡಿಕಲ್‌ಗಳಲ್ಲಿ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ. ಮಾಂಸ ಹಾಗೂ ಮೀನು ಮಾರುಕಟ್ಟೆಗಳು ಬಂದ್ ಆಗಿದೆ.
ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದು, ಲಾಕ್‌ಡೌನ್ ನಿಯಾಮಾವಳಿ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಾರದಿಂದ ಕೊರೊನಾ ವೈರಸ್ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು ಕೊರೊನಾಗೆ ಬಲಿಯಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ. ಜುಲೈ 11 ರ ಶನಿವಾರದಂದು ಸೋಂಕಿತರ ಸಂಖ್ಯೆಯು 2000 ದಾಟಿದೆ. ಈವರೆಗೆ 41 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.