Connect with us

DAKSHINA KANNADA

ಸುಳ್ಯ – ದುಷ್ಕರ್ಮಿಗಳಿಂದ ವ್ಯಕ್ತಿಯ ಮೇಲೆ ಗುಂಡಿನ ದಾಳಿ

ಸುಳ್ಯ ಜೂನ್ 06: ವಾಹನವೊಂದರಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಸುಳ್ಯದಲ್ಲಿ ನಡೆದಿದೆ.


ಸುಳ್ಯದ ವೆಂಕಟರಮಣ ಸೊಸೈಟಿ ಬಳಿ ನಿನ್ನೆ ರಾತ್ರಿ 10:30 ಸುಮಾರಿಗೆ ಈ ಘಟನೆ ನಡೆದಿದೆ. ದಾಳಿಯಲ್ಲಿ ಗಾಯಗೊಂಡವರನ್ನು ಸುಳ್ಯ ಕಸಬಾ ಗ್ರಾಮದ ಜಯನಗರ ಮನೆಯ ಮಹಮ್ಮದ್‌ ಸಾಹಿ(39) ಎಂದು ಗುರುತಿಸಲಾಗಿದೆ.


ಮಹಮ್ಮದ್‌ ಸಾಹಿ ತನ್ನ ತಂಗಿಯ ಮನೆಗೆ ತೆರಳಿ ಬರುತ್ತಿರುವ ಸಂದರ್ಭ ಸುಳ್ಯದ ಮೊಗರ್ಪಣೆ ಯಲ್ಲಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬಳಿ ಸ್ಕಾರ್ಪಿಯೊ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಹಮ್ಮದ್‌ ಸಾಹಿ ಮೇಲೆ ಗುಂಜು ಹಾರಿಸಿದ್ದಾರೆ. ಆದರೆ ಗುಂಡು ಬೆನ್ನಿನ ಎಡ ಬದಿಗೆ ತಾಗಿ ಕಾರಿನ ಬಲ ಬದಿಯ ಎರಡು ಡೋರ್‌ಗಳ ಮದ್ಯಕ್ಕೆ ಗುಂಡು ತಗುಲಿ ಕಾರು ಜಖಂಗೊಂಡಿದೆ. ಗಾಯಾಳು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Click to comment

You must be logged in to post a comment Login

Leave a Reply