Connect with us

    DAKSHINA KANNADA

    ಸುಳ್ಯ – ಇನ್ನೋವಾ ಕಾರು ಪಲ್ಟಿ – ತಾಯಿ ಜೊತೆ 3 ವರ್ಷದ ಮಗು ಸಾವು

    ಸುಳ್ಯ ಡಿಸೆಂಬರ್ 12: ಮದುವೆ ಸಮಾರಂಭಕ್ಕೆ ತೆರಳುತಿದ್ದ ಇನ್ನೋವಾ ಕಾರು ಸ್ಕಿಡ್ ಆಗಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಹಾಗೂ 3 ವರ್ಷ ಪ್ರಾಯದ ಮಗು ಸಾವನಪ್ಪಿರುವ ಘಟನೆ ಜಾಲ್ಸೂರು – ಕಾಸರಗೋಡು ರಸ್ತೆಯ ಪರಪ್ಪೆ ಎಂಬಲ್ಲಿ ಸೋಮವಾರ ಸಂಭವಿಸಿದೆ.


    ಮೃತರನ್ನು ಸುಳ್ಯದ ನಾವೂರು ಬೋರುಗುಡ್ಡೆ ಅಬ್ದುಲ್ಲಾ ಎಂಬವರ ಪುತ್ರಿ ಶಾಹಿನಾ (28) ಹಾಗೂ ಅವರ ಮಗು 3 ವರ್ಷ ಪ್ರಾಯದ ಶಜಾ ಎಂದು ಗುರುತಿಸಲಾಗಿದೆ. ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಮರಕ್ಕೆ ಗುದ್ದಿದೆ. ಈ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮಗು ಸಾವನಪ್ಪಿದ್ದು, ಕಾರಲ್ಲಿದ್ದ ನಾಲ್ವರು ತೀವ್ರ ಗಾಯಗೊಂಡಿದ್ದು, ಗಾಯಾಳುಗಳನ್ನು ಕಾಸರಗೋಡು ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply