LATEST NEWS
ಸುಹಾಶ್ ಶೆಟ್ಟಿ ಹ*ತ್ಯೆ ಬಳಿಕ ಸೋಶಿಯಲ್ ಮಿಡಿಯಾದಲ್ಲಿ ಕೋಮು ಪ್ರಚೋದಕ ಸಂದೇಶ – 12 ಪ್ರಕರಣ ದಾಖಲು

ಮಂಗಳೂರು ಮೇ 03: ಬಜ್ಪೆ ಕಿನ್ನಿಪದವಿನಲ್ಲಿ ನಡೆದ ಹಿಂದೂ ಕಾರ್ಯಕರ್ತರ ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೋಮುಭಾವನೆ ಕೆರಳಿಸುವಂತಹ ಪೋಸ್ಟ್ ಹಾಕಿದ್ದ ವ್ಯಕ್ತಿಗಳು ಮತ್ತು ಗುಂಪುಗಳ ವಿರುದ್ಧ ನಗರ ಪೊಲೀಸ್ ಕಮಿಷನರೇಟ್‌ನ ವಿವಿಧ ಠಾಣೆಗಳಲ್ಲಿ ಒಟ್ಟು 12 ಪ್ರಕರಣಗಳು ದಾಖಲಾಗಿವೆ.
ಮೂಲ್ಕಿ, ಕಾವೂರು ಮತ್ತು ಮಂಗಳೂರು ದಕ್ಷಿಣ ಠಾಣೆಗಳಲ್ಲಿ ತಲಾ ಎರಡು, ಮಂಗಳೂರು ಉತ್ತರ, ಪೂರ್ವ, ಉರ್ವ, ಬರ್ಕೆ, ಮೂಡುಬಿದಿರೆ ಮತ್ತು ಕಂಕನಾಡಿ ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆ ತರುವ ಉದ್ದೇಶದಿಂದ ಪೋಸ್ಟ್ ಹಾಕಲಾಗಿದ್ದು ಭಾರತೀಯ ನ್ಯಾಯಸಂಹಿತೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
