Connect with us

  DAKSHINA KANNADA

  ಸುಬ್ರಹ್ಮಣ್ಯ : ಲೂಡಾ ಬಳಸಿ ಜೂಜಾಟ ಆಡುತ್ತಿದ್ದ ಅಡ್ಡೆಗೆ ಪೊಲೀಸ್ ದಾಳಿ..!

  ಹಣ ಪಣವಾಗಿಟ್ಟು ಲೂಡಾ ಉಪಯೋಗಿಸಿ ಜೂಜಾಟ ಆಟವಾಡುತ್ತಿದ್ದ ಜೂಜು ಅಡ್ಡೆಗೆ ಸುಬ್ರಹ್ಮಣ್ಯ ಪೊಲೀಸರು ರೈಡ್ ಮಾಡಿದ್ದಾರೆ.

  ಸುಬ್ರಹ್ಮಣ್ಯ: ಹಣ ಪಣವಾಗಿಟ್ಟು ಲೂಡಾ ಉಪಯೋಗಿಸಿ ಜೂಜಾಟ ಆಟವಾಡುತ್ತಿದ್ದ ಜೂಜು ಅಡ್ಡೆಗೆ ಸುಬ್ರಹ್ಮಣ್ಯ ಪೊಲೀಸರು ರೈಡ್ ಮಾಡಿದ್ದಾರೆ.


  ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರ ಬಸ್ಸು ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ಹಣ ಪಣವಾಗಿಟ್ಟುಕೊಂಡು ಅದೃಷ್ಟ ಆಟವಾದ ಲೂಡ ದಾಳವನ್ನು ಉಪಯೋಗಿಸಿ ಜೂಜಾಟ ಆಟ ಆಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು.

  ಪೊಲೀಸ್ ದಾಳಿ ವೇಳೆ ಸ್ಥಳದಲ್ಲಿದ್ದವರು ಪರಾರಿಯಾಗಿದ್ದಾರೆ.  ಈ ಸಂದರ್ಭ ಕಿರಣ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

  ಯಾವುದೇ ಪರವಾನಿಗೆ ಇಲ್ಲದೇ ಅದೃಷ್ಟದ ಆಟ ಆಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

  ಉಳಿದವರು ಸ್ಥಳದಿಂದ ಓಡಿ ಹೋಗಿದ್ದು ಅವರ ವಿಳಾಸ ಕೇಳಲಾಗಿ ಕುಮಾರ್ ಗಡಿಕಲ್ಲು , ಅವಿನ್ ಗಡಿಕಲ್ಲು, ಲಕ್ಷ್ಮಣ ಕಡೋಡಿ ಎಂಬುದಾಗಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

  ದಾಳಿಯ ಸಮಯ ಅದೃಷ್ಟದ ಆಟಕ್ಕೆ ಒಟ್ಟು ರೂಪಾಯಿ 1350, ಆಟಕ್ಕೆ ಉಪಯೋಗಿಸಿದ ಲೂಡದ ದಾಳ-1, ಲೂಡದ ದಾಳ ಹಾಕುವರೇ ಉಪಯೋಗಿಸಿದ ರಟ್ಟಿನ ತುಂಡು -1 ಇವುಗಳನ್ನು ಸ್ವಾಧೀನಪಡಿಸಿಕೊಂಡು ಸುಬ್ರಹ್ಮಣ್ಯ ಠಾಣಾ ಅ.ಕ್ರ 64/2023, ಕಲಂ:87 ಕೆ ಪಿ ಆಕ್ಟ್ ನಂತೆ ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply