Connect with us

    BELTHANGADI

    ಸೌಜನ್ಯ ಪ್ರಕರಣ : ಬೆಳ್ತಂಗಡಿ ಚಲೋ, ಮಹಾಧರಣಿ -ಬಿಜೆಪಿ ಸಂಸದ ಶಾಸಕರ ವಿರುದ್ಧ ಹರಿಹಾಯ್ದ ವಸಂತ ಬಂಗೇರ..!

    ನಳಿನ್ ಕುಮಾರ್ ಕಟೀಲ್ ಅವ್ರೇ ಕಳೆದ ಹನ್ನೊಂದು ವರ್ಷ ಎಲ್ಲಿ ಹೋಗಿದ್ರಿ ನೀವು ? ಪಾರ್ಲಿಮೆಂಟ್ ನಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ವಾ? ಸಂಸತ್‌ನಲ್ಲಿ ಮಾತನಾಡದ ನೀವು ಇಲ್ಲಿ ಮಾತಾಡಿ ಏನು ಪ್ರಯೋಜನ ಎಂದು ಸಂಸದರನ್ನು ತರಾಟೆಗೆ ತಗೊಂಡ ವಸಂತ ಬಂಗೇರಾರು ಶಾಸಕ ಹರೀಶ್ ಪೂಂಜಾರನ್ನು ತರಾಟೆಗೆ ತಗೊಂಡರು.

    ಬೆಳ್ತಂಗಡಿ : ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಎಸ್.ಐ.ಟಿ.ಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಜನಪರ ಸಂಘಟನೆಗಳ ನೇತೃತ್ವದಲ್ಲಿ ಚಲೋ ಬೆಳ್ತಂಗಡಿ ಮಹಾಧರಣಿ ಹಮ್ಮಿಕೊಂಡಿತ್ತು .

    ಜನಪರ ಸಂಘಟನೆಗಳ ಒಕ್ಕೂಟ ದ.ಕ. ಹಾಗೂ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ, ಕರ್ನಾಟಕ ಇದರ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಜನಪರ ಸಂಘಟನೆಗಳು ಒಟ್ಟಾಗಿ ಹಮ್ಮಿಕೊಂಡಿರುವ ‘ಚಲೋ ಬೆಳ್ತಂಗಡಿ’ ಧರಣಿಗೆ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಜನಪರ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ.ವಸಂತ ಬಂಗೇರ ಚಾಲನೆ ನೀಡಿದರು.

    ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಬಂಗೇರಾ ಹನ್ನೊಂದು ವರ್ಷಗಳ ಹಿಂದೆ ಸೌಜನ್ಯ ಳ ಹತ್ಯೆಯಾಗಿದೆ.

    ಹನ್ನೊಂದು ವರ್ಷಗಳಿಂದ ಪ್ರತಿಭಟನೆಗಳು ನಿರಂತರವಾಗಿ ನಡೆದಿದೆ.

    ಸೌಜನ್ಯ ಅತ್ಯಾಚಾರ ಸಂಧರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು.

    ಪ್ರಾರಂಭದಲ್ಲಿ ಪೊಲೀಸ್ ತನಿಖೆ ಬಳಿಕ ಸಿಐಡಿ ತನಿಖೆಯಾಯಿತು ಆದ್ರೂಈ ತನಿಖೆಗಳು ಹಳ್ಳ ಹಿಡಿದವು.

    ಬಳಿಕ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ವೇಳೆ ಸಿಬಿಐಗೆ ವಹಿಸಲಾಯಿತು.

    ಆರು ತಿಂಗಳ ಕಾಲ ಸಿಬಿಐ ಒಳ್ಳೆಯ ತನಿಖೆ ಮಾಡಿತ್ತು ಆದ್ರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಸಿಬಿಐ ತನಿಖಾಧಿಕಾರಿ ಮುರುಗನ್ ರ ಬದಲಾವಣೆ ಮಾಡಲಾಯಿತು.

    ಹನ್ನೊಂದು ವರ್ಷಗಳ ತನಿಖೆ ಬಳಿಕ ಸಿಬಿಐ ಸಂತೋಷ್ ರಾವ್ ನನ್ನು ನಿರಾಪರಾಧಿ ಎಂದು ಹೇಳಿತು ಆದ್ದರಿಂದ ಸೌಜನ್ಯ ಪ್ರಕರಣ ಹಳ್ಳ ಹಿಡಿಯಲು ಏನು ಕಾರಣ ಎಂದು ನಾವು ತಿಳಿದುಕೊಳ್ಳಬೇಕು ಎಂದ ಅವರು ನಿನ್ನೆ ಬಿಜೆಪಿ ಯವರು ಇದೇ ಸ್ಥಳದಲ್ಲಿ ಪ್ರತಿಭಟನೆ ಮಾಡಿದ್ದರು.

    ಮಿನಿವಿಧಾನಸೌಧಕ್ಕೆ ಬೀಗ ಹಾಕಿದ ಸಂದರ್ಭದಲ್ಲಿ ಬಿಜೆಪಿ ಪ್ರತಿಭಟನೆ ಮಾಡಿತ್ತು.

    ನಳಿನ್ ಕುಮಾರ್ ಕಟೀಲ್ ಅವ್ರೇ ಕಳೆದ ಹನ್ನೊಂದು ವರ್ಷ ಎಲ್ಲಿ ಹೋಗಿದ್ರಿ ನೀವು ? ಪಾರ್ಲಿಮೆಂಟ್ ನಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ವಾ? ಸಂಸತ್‌ನಲ್ಲಿ ಮಾತನಾಡದ ನೀವು ಇಲ್ಲಿ ಮಾತಾಡಿ ಏನು ಪ್ರಯೋಜನ ಎಂದು ಸಂಸದರನ್ನು ತರಾಟೆಗೆ ತಗೊಂಡ ವಸಂತ ಬಂಗೇರಾರು ಶಾಸಕ ಹರೀಶ್ ಪೂಂಜಾರನ್ನು ತರಾಟೆಗೆ ತಗೊಂಡರು.

    ಬೆಳ್ತಂಗಡಿ ಶಾಸಕರಾಗಿ 6ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ.

    ಈ ಅವಧಿಯಲ್ಲಿ ಅವರು ಸೌಜನ್ಯಾ ಪರವಾಗಿ ಒಂದಕ್ಷರ ಮಾತನಾಡಲಿಲ್ಲ ಏಕೆ.? ನೀವು ಆದಿತ್ಯವಾರ ಪ್ರತಿಭಟನೆ ಮಾಡಲು ಲಾಯಕ್ಕು ಎಂದು ಬಿಜೆಪಿ ಶಾಸಕರುಗಳ ವಿರುದ್ದ ಹರಿಹಾಯ್ದರು.

    ಪ್ರೊ.ನರೇಂದ್ರ ನಾಯಕ್, ಕೆ.ನೀಲಾ, ಮೀನಾಕ್ಷಿ ಬಾಳಿ, ಸಬೀಹಾ ಭೂಮಿಗೌಡ, ಮುನೀರ್ ಕಾಟಿಪಳ್ಳ, ದೇವಿ, ಸುರೇಂದ್ರ ರಾವ್, ಗೌರಮ್ಮ, ಭರತ್ ರಾಜ್ ಮಂಡ್ಯ, ಯಾದವ ಶೆಟ್ಟಿ, ಬಸವರಾಜಪ್ಪ ಪೂಜಾರಿ, ಜನಾರ್ದನ್ ಜೆನ್ನಿ, ಪ್ರಭಾ ಬೆಳಮಂಗಲ, ಒಡನಾಡಿ ಸ್ಟಾನ್ಲಿ, ಪರಶು, ಸುನೀಲ್ ಕುಮಾರ್ ಬಜಾಲ್, ಇಮ್ತಿಯಾಝ್, ಸತೀಶ್ ಕಾಶಿಪಟ್ಣ, ನಾಗೇಶ್ ಕುಮಾರ್, ನೇಮಿರಾಜ ಕಿಲ್ಲೂರು, ಚಂದು ಎಲ್., ಶೇಖರ ಕುಕ್ಕೇಡಿ, ಜಯನ್ ಮಲ್ಪೆ, ಶಾಲೆಟ್ ಪಿಂಟೋ, ರೂಪಾ ಚೇತನ್, ಸಂಜೀವ ಬಾಳ್ಕೂರು, ರಘು ಎಕ್ಕಾರು, ಅಯಾಝ್ ಕೃಷ್ಣಾಪುರ, ಪ್ರೊ.ಕಾಳ ಚೆನ್ನೇಗೌಡ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply