LATEST NEWS
ಚಲಿಸುತ್ತಿರುವ ಕಾರಿನಿಂದ ಹೊರ ನಿಂತು ಸ್ಟಂಟ್ ವಿಡಿಯೋ ವೈರಲ್ – ಕಾರು ಪತ್ತೆ ಹಚ್ಚಿ ದಂಡ ವಿಧಿಸಿದ ಪೊಲೀಸರು

ಮಂಗಳೂರು ಜುಲೈ 02: ಚಲಿಸುತ್ತಿರುವ ಕಾರಿನ ಡೋರ್ ನಿಂದ ಅಪಾಯಕಾರಿಯಾಗಿ ನಿಂತು ಯವಕರ ಗುಂಪೊಂದು ಸ್ಟಂಟ್ ಮಾಡಿದ ವಿಡಿಯೋ ವೈರಲ್ ಆಗಿದ್ದು. ಪೊಲೀಸರು ಕಾರನ್ನು ಪತ್ತೆ ಹಚ್ಚಿ ದಂಡ ವಿಧಿಸಿದ್ದಾರೆ.
ವಲಚ್ಚಿಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 73 ಯಲ್ಲಿ ಯುವಕರು ಚಲಿಸುತ್ತಿರುವ ಕಾರಿನಿಂದ ಹೊರಗೆ ಬಂದು ಡ್ಯಾನ್ಸ್ ಮಾಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಹಾಗೂ ಅವರ ಸಿಬ್ಬಂದಿಗಳು ಸದ್ರಿ ಯುವಕರಿಗೆ ಹಾಗೂ ವಾಹನವನ್ನು ದಿನಾಂಕ 01-07-2025 ರಂದು ಪತ್ತೆ ಹಚ್ಚಿ, ಯುವಕರನ್ನು ವಿಚಾರಣೆಯನ್ನು ನಡೆಸಿ ಸೂಕ್ತ ತಿಳುವಳಿಕೆಯನ್ನು ನೀಡಿ, ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ರೂ – 6500/- ದಂಡವನ್ನು ವಿಧಿಸಿದ್ದಾರೆ.
1 Comment