Connect with us

    LATEST NEWS

    ಶಿರ್ವ ಫೈಝುಲ್ ಇಸ್ಲಾಂ ಮದರಸದ ನಾಲ್ವರು ಮಕ್ಕಳು – ನಾಪತ್ತೆ

    ಉಡುಪಿ ಮೇ 15: ಶಿರ್ವ ಫೈಝುಲ್ ಇಸ್ಲಾಂ ಮದರಸದ ನಾಲ್ವರು ಮಕ್ಕಳು ನಾಪತ್ತೆಯಾದ ಘಟನೆ ಮೇ 14ರಂದು ನಡೆದಿದೆ.


    ನಾಪತ್ತೆಯಾದ ವಿದ್ಯಾರ್ಥಿಗಳನ್ನು ಬಿಹಾರ ಮೂಲದ ತಬಾರಕ್, ಜಂಶೀದ್, ತಂಝೀರ್ ಆಲಮ್, ಶಾಹಿಲ್ ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಅಪ್ರಾಪ್ತರಾಗಿದ್ದಾರೆ. ಮದ್ರಸ ಶಿಕ್ಷಣ ಕಲಿಯುತ್ತಿದ್ದ ಇವರು, ಮಧ್ಯಾಹ್ನದ ವೇಳೆ ಮದ್ರಸದಿಂದ ಹೊರಗಡೆ ಹೋದವರು ಈವರೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆಂದು ತಿಳಿದು ಬಂದಿದೆ. ಇಲ್ಲಿಂದ ಅವರು ತಮ್ಮ ಊರಿಗೆ ಹೋಗಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಫೈಝುಲ್ ಇಸ್ಲಾಂ ಎಜುಕೇಶನ್ ಟ್ರಸ್ಟ್ನ ಫರ್ವೇಝ್ ಸಲೀಂ ನೀಡಿದ ದೂರನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ

    Share Information
    Advertisement
    Click to comment

    You must be logged in to post a comment Login

    Leave a Reply