Connect with us

    LATEST NEWS

    ನಿರಾಲ ಬಾರ್ ನಲ್ಲಿ ಮದ್ಯ ಸೇವಿಸಿ ನಿರಾಳರಾದ ವಿಧ್ಯಾರ್ಥಿಗಳು

    ನಿರಾಲ ಬಾರ್ ನಲ್ಲಿ ಮದ್ಯ ಸೇವಿಸಿ ನಿರಾಳರಾದ ವಿಧ್ಯಾರ್ಥಿಗಳು

    ಪುತ್ತೂರು ಅಗಸ್ಟ್ 1: ತರಗತಿ ಸಮಯದಲ್ಲೇ ವಿದ್ಯಾರ್ಥಿಗಳು ಬಾರ್ ನಲ್ಲಿ ಕೂತು ಮದ್ಯ ಸೇವಿಸುತ್ತಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.
    ಖಾಸಗಿ ಕಾಲೇಜೊಂದಕ್ಕೆ ಸೇರಿದ ನಾಲ್ವರು ವಿದ್ಯಾರ್ಥಿಗಳು ಪುತ್ತೂರು ನಗರ ಮಧ್ಯಭಾಗದಲ್ಲಿರುವ ನಿರಾಲಾ ಎನ್ನುವ ಬಾರ್ ನಲ್ಲಿ ನಿರಾಳವಾಗಿ ಮದ್ಯ ಸೇವಿಸುತ್ತಿದ್ದರು.

    ಕಾಲೇಜು ಸಮವಸ್ತ್ರದೊಂದಿಗೆ ಬಾರ್ ಗೆ ಪ್ರವೇಶಿಸಿರುವ ವಿದ್ಯಾರ್ಥಿಗಳಿಗೆ ಬಾರ್ ಸಿಬ್ಬಂದಿಗಳು ಮದ್ಯವನ್ನು ಪೂರೈಸಿದ್ದಾರೆ. ವಿದ್ಯಾರ್ಥಿಗಳು ದುಷ್ಚಟಗಳಿಗೆ ಬಲಿಯಾಗಬಾರದು ಎನ್ನುವ ಕಾರಣಕ್ಕಾಗಿ ಎಲ್ಲಾ-ಶಾಲಾ ಕಾಲೇಜುಗಳ ಆಸುಪಾಸಿನಲ್ಲಿ ಮದ್ಯ-ತಂಬಾಕು ಪೂರೈಕೆಗೆ ನಿಷೇಧ ಹೇರಿದೆ.

    ಬಾರ್ ಗಳಿಗೂ ನಿರ್ದಿಷ್ಟ ವಯೋಮಾನದ ವಿದ್ಯಾರ್ಥಿಗಳಿಗೆ ಮದ್ಯವನ್ನು ಪೂರೈಸಬಾರದು ಎನ್ನುವ ನಿಯಮವೂ ಇದೆ. ಆದರೆ ಪುತ್ತೂರಿನ ಈ ಬಾರ್ ಸಿಬ್ಬಂದಿಗಳು ಸಮವಸ್ತ್ರದಲ್ಲಿ ಬಂದ ವಿದ್ಯಾರ್ಥಿಗಳಿಗೂ ಮದ್ಯ ನೀಡುವ ಮೂಲಕ ವಿದ್ಯಾರ್ಥಿಗಳನ್ನು ದುಷ್ಚಟಗಳಿಗೆ ಪ್ರೇರೇಪಣೆ ನೀಡುವ ಮಹತ್ಕಾರ್ಯ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply