KARNATAKA
ಹಿಜಬ್ ತೆಗೆಯಲು ಓಪ್ಪದ ವಿಧ್ಯಾರ್ಥಿನಿಯರು..ತರಗತಿ ಬಿಟ್ಟು ಮನೆ ಕಡೆಗೆ

ಶಿವಮೊಗ್ಗ : ಹಿಜಬ್ ವಿವಾದ ಇನ್ನಷ್ಟು ಕಗ್ಗಾಂಟುವ ಪರಿಸ್ಥಿತಿ ತಂದೊಡ್ಡಿದ್ದು, ಹಿಜಬ್ ಇಲ್ಲದೆ ತರಗತಿಯಲ್ಲಿ ಪಾಠ ಕೇಳುವುದಿಲ್ಲ ಎಂದು ಹಠ ಹಿಡಿದ ವಿಧ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ತೆರಳುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ರೀತಿಯ ಘಟನೆಗಳು ನಡೆದಿದ್ದು, ಸದ್ಯ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಯಾವುದೇ ಧಾರ್ಮಿಕ ಗುರುತು ಇರುವ ಬಟ್ಟೆಗಳನ್ನು ಧರಿಸಿ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ಹೋಗಬಾರದು ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದರೂ ಮುಸ್ಲಿಂ ವಿದ್ಯಾರ್ಥಿನಿಯರು ಮಾತ್ರ ತಮ್ಮ ಹಠವನ್ನು ಮುಂದುವರೆಸಿದ್ದಾರೆ.
ಇಂದು ಕೂಡ ಶಿವಮೊಗ್ಗದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿ ಮನೆಗೆ ವಾಪಸ್ ಬಂದಿದ್ದಾರೆ. ಕೊಪ್ಪಳದ ಮೌಲಾನಾ ಆಜಾದ್ ಶಾಲೆಗೆ, ಕೊಡಗಿನ ನೆಲ್ಲಿಹುದಿಗೇರಿ ಸರ್ಕಾರಿ ಶಾಲೆಯ 20 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಗೆ ಹಿಜಾಬ್ ಧರಿಸಿ ಬಂದು ತರಗತಿಯೊಳಗೆ ಬಿಡದ ಕಾರಣ ಮನೆಗೆ ವಾಪಸ್ ಆಗಿದ್ದಾರೆ.ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಎಷ್ಟೇ ಮನವೊಲಿಸಿದರೂ ವಿದ್ಯಾರ್ಥಿನಿಯರು ಕೇಳದೆ ಮನೆಗೆ ವಾಪಸ್ಸಾಗಿದ್ದಾರೆ.

ಕಲಬುರಗಿಯ ಉರ್ದು ಶಾಲೆಯಲ್ಲಿ ಹಿಜಾಬ್ ಧರಿಸದೆ ಒಳಗೆ ಬಿಡುವುದಿಲ್ಲ ಎಂದು ಬಹುತೇಕ ಮಕ್ಕಳು ಶಾಲೆಗೆ ಇಂದು ಬಂದೇ ಇಲ್ಲ, ಗೈರಾಗಿದ್ದಾರೆ. ಇನ್ನು ಕಲಬುರಗಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ತಾಯಿಯೊಬ್ಬರು ಮಾಧ್ಯಮಗಳೊಂದಿಗೆ ಮಾತನಾಡಿ ಇನ್ನೆರಡು ಮೂರು ದಿನಗಳಲ್ಲಿ ಕೋರ್ಟ್ ತೀರ್ಪು ಬರಬಹುದಲ್ಲವೇ ಅಲ್ಲಿಯವರೆಗೆ ಹಿಜಾಬ್ ಧರಿಸಲು ಬಿಡದಿದ್ದರೆ ಮಕ್ಕಳು ಮನೆಯಲ್ಲಿಯೇ ಇರಲಿ, ನೋಡೋಣ ಆಮೇಲೆ ಏನಾಗುತ್ತೋ, ನಮ್ಮ ಮಕ್ಕಳಿಗೆ ಶಾಲೆ, ವಿದ್ಯೆ ಬೇಕು ನಿಜ. ಆದರೆ ನಮ್ಮ ಧರ್ಮದಲ್ಲಿರುವ ಹಿಜಾಬ್ ಬೇಕಲ್ಲವೇ ಎಂದರು.
ನಾಳೆ ಪಿಯುಸಿ ಮತ್ತು ಪದವಿ ಕಾಲೇಜುಗಳು ಆರಂಭವಾಗುತ್ತಿದ್ದು, ಇನ್ನು ಕಾಲೇಜಿಗೆ ಬರುವ ಮುಸ್ಲಿಂ ವಿದ್ಯಾರ್ಥಿನಿಯರು ಏನು ಹೇಳುತ್ತಾರೋ, ಏನು ಮಾಡುತ್ತಾರೋ ಎಂಬ ಆತಂಕ ಉಂಟಾಗಿದೆ.