Connect with us

LATEST NEWS

ಆರು ಜನ ವಿಧ್ಯಾರ್ಥಿನಿಯರಿಗೆ ರಾಜ್ಯ ಹಾಗೂ ಇಡೀ ದೇಶ ನಡುಗಿ ಬಿಟ್ಟಿದೆ – ಕಲ್ಲಡ್ಕ್ ಪ್ರಭಾಕರ್ ಭಟ್

ಮಂಗಳೂರು : ಹಿಜಾಬ್ ವಿವಾದವನ್ನು ನಿಭಾಯಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ್ ಅಸಮಧಾನ ವ್ಯಕ್ತಪಡಿಸಿದ್ದಾರೆ.


ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಪುನ: ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಿಜಬ್ ವಿಚಾರ ಸಣ್ಣ ವಿಚಾರ ಅಲ್ಲ ಅದು ದೇಶವನ್ನು ಎರಡನೇ ಭಾರೀ ವಿಭಜನೆ ಮಾಡಲು ಉಂಟಾಗಿರುವ ಬೀಜಾಂಕುರ ಎಂದು ಹೇಳಿದರು.

ಇದೀಗ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ರಾಜ್ಯ ಸರಕಾರ ಹಿಜಬ್ ವಿವಾದದ ಸಂಬಂಧ ಹೆದರಿಕೊಂಡಿದ್ದು, ಆರು ಜನ ವಿಧ್ಯಾರ್ಥಿನಿಯರಿಗೆ ಈ ದೇಶ ರಾಜ್ಯ ನಡುಗಿ ಬಿಟ್ಟಿದ್ದು, ಹೈಕೋರ್ಟ್ ಹೇಳಿದರೂ ಕೂಡ ರಾಜ್ಯ ಸರಕಾರ ಶಾಲೆ ನಡೆಸದೇ ಇರುವುದು ಬೇಸರ ತರಿಸಿದೆ ಎಂದು ಹೇಳಿದರು.

Advertisement
Click to comment

You must be logged in to post a comment Login

Leave a Reply