UDUPI
ಅಪಘಾತದಲ್ಲಿ ಸಾವಿನ ದವಡೆಯಲ್ಲಿದ್ದ ಯುವತಿಗೆ ಪ್ರಥಮ ಚಿಕಿತ್ಸೆ ನೀಡಿ ಬದುಕಿಸಿದ ಯುವತಿ

ಉಡುಪಿ ಜೂನ್ 22: ನಿನ್ನೆ ಗ್ರಹಣದ ದಿನ ಬಾರ್ಕೂರು ಚೌಳಿ ಕೆರೆಗೆ ಕಾರು ಬಿದ್ದು ಈ ಕಾರಿನಲ್ಲಿದ್ದ ಉದ್ಯಮಿ ಸಂತೋಷ್ ಶೆಟ್ಟಿ ಎಂಬುವವರು ಕಾರಿನಲ್ಲೇ ಮೃತಪಟ್ಟಿದ್ದರು.ಇನ್ನು ಇದೇ ಕಾರಿನಲ್ಲಿದ್ದ ಯುವತಿಯೊಬ್ಬಳನ್ನು ಸ್ಥಳೀಯ ವಿಧ್ಯಾರ್ಥಿನಿಯೊಬ್ಬಳು ಪ್ರಥಮ ಚಿಕಿತ್ಸೆ ನೀಡಿದ ಯುವತಿಯನ್ನು ಬದುಕಿಸಿದ್ದಾಳೆ.
ಬ್ರಹ್ಮಾವರ ಲಿಟ್ಲ್ ರಾಕ್ ಕಾಲೇಜಿನ ವಿದ್ಯಾರ್ಥಿನಿ ನಮನ ಎಂಬಾಕೆ ಈ ಕಾರು ಅಪಘಾತ ಆದಾಗ ಅದೇ ಸ್ಥಳದಲ್ಲಿದ್ದರು. ಸ್ಥಳೀಯರು ಕಾರಿನಲ್ಲಿದ್ದ ಉದ್ಯಮಿ ಸಂತೋಷ್ ಶೆಟ್ಟಿ ಹಾಗೂ ಮತ್ತೊಬ್ಬ ವಿಧ್ಯಾರ್ಥಿನಿಯನ್ನು ಹೊರಗೆ ತೆಗೆದಿದ್ದರು. ಆದರೆ ಸಂತೋಷ್ ಶೆಟ್ಟಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮತ್ತೊಬ್ಬ ವಿಧ್ಯಾರ್ಥಿನಿ ಸ್ಥಿತಿ ಗಂಭೀರವಾಗಿತ್ತು.

ಈ ಸಂದರ್ಭ ಅಲ್ಲೆ ಇದ್ದ ಸುಮನ ತಕ್ಷಣ ಕಾರ್ಯಪ್ರವೃತ್ತಳಾಗಿ ವಿಧ್ಯಾರ್ಥಿನಿಗೆ ಪ್ರಥಮ ಚಿಕಿತ್ಸೆ ನೀಡಿ, ಯುವತಿಯನ್ನು ಬದುಕಿಸುವಲ್ಲಿ ಶ್ರಮವಹಿಸಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿದ್ಯಾರ್ಥಿನಿಯ ಧೈರ್ಯವಂತಿಕೆ, ಸಮಯಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗಿದೆ. ಅಪಘಾತ ನಡೆದ ಬಳಿಕ ಮೊಬೈಲ್ ನಲ್ಲಿ ವಿಡಿಯೋ ಫೋಟೊ ತೆಗೆದು ಸುಮ್ಮನಾಗುವ ಇಂತಹ ಕಾಲದಲ್ಲಿ ಯುವತಿಯ ಜೀವ ಉಳಿಸಿದ ವಿದ್ಯಾರ್ಥಿನಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.