LATEST NEWS
ಮಲ್ಪೆ ಬೀಚ್ ನಲ್ಲಿ ಸಮುದ್ರ ಅಲೆಗೆ ಸಿಕ್ಕಿ ವಿಧ್ಯಾರ್ಥಿ ಸಾವು
ಮಲ್ಪೆ ಬೀಚ್ ನಲ್ಲಿ ಸಮುದ್ರ ಅಲೆಗೆ ಸಿಕ್ಕಿ ವಿಧ್ಯಾರ್ಥಿ ಸಾವು
ಉಡುಪಿ ಡಿಸೆಂಬರ್ 29: ಪ್ರವಾಸಕ್ಕೆಂದು ಬಂದ ವಿದ್ಯಾರ್ಥಿಯೊರ್ವ ಸಮುದ್ರ ಅಲೆಗಳಿಗೆ ಸಿಕ್ಕಿ ಮೃತಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ.
ಮೃತಪಟ್ಟ ವಿಧ್ಯಾರ್ಥಿಯನ್ನು ದಾವಣಗೆರೆ ಜಿಲ್ಲೆಯ ಹಲಿಹಲ್ಲಾ ಹೈಸ್ಕೂಲ್ ವಿಧ್ಯಾರ್ಥಿ ಮಂಜುನಾಥ ಎಂದು ಗುರುತಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಹಲಿಹಲ್ಲಾ ಹೈಸ್ಕೂಲ್ ನಿಂದ ವಿದ್ಯಾರ್ಥಿಗಳ ಗುಂಪು ಉಡುಪಿ ಪ್ರವಾಸಕ್ಕೆ ಬಂದಿದ್ದರು. ಇಂದು ಮಲ್ಪೆ ಸಮುದ್ರದಲ್ಲಿ ಆಡಲು ವಿಧ್ಯಾರ್ಥಿಗಳ ಗುಂಪು ಇಳಿದಿದೆ. ಈ ಮಧ್ಯೆ ಸಮುದ್ರದಲ್ಲಿ ಎದ್ದ ದೊಡ್ಡ ಅಲೆಗೆ ಮಂಜುನಾಥ ಸಿಕ್ಕಿದ್ದು ಈಜಲು ಆಗದೆ ನೀರಿನಲ್ಲಿ ಮುಳುಗಿ ಮಂಜುನಾಥ ಮೃತಪಟ್ಟಿದ್ದಾನೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.