Connect with us

  KARNATAKA

  ಮೊಬೈಲ್ ಚಾರ್ಜರ್‌ ಬಳಸುತ್ತಿದ್ದಾಗ ಕರೆಂಟ್ ಶಾಕ್ ಗೆ ವಿದ್ಯಾರ್ಥಿ ಬಲಿ..!

  ಬೆಂಗಳೂರು: ಮೊಬೈಲ್  ಚಾರ್ಜರ್‌  ಬಳಸುತ್ತಿದ್ದ ಸಂದರ್ಭ  ವಿದ್ಯಾರ್ಥಿ ಕರೆಂಟ್ ಶಾಕ್ ಹೊಡೆದು  ಸಾವಿಗೀಡಾದ ಘಟನೆ ಬೆಂಗಳೂರಿನ ಮಂಜುನಾಥ್ ನಗರದ‌ ಪಿಜಿಯಲ್ಲಿ ನಡೆದಿದೆ.

  ಬೀದರ್ ಮೂಲದ ಶ್ರೀನಿವಾಸ್ (24) ಸಾವನ್ನಪ್ಪಿದ ವಿದ್ಯಾರ್ಥಿಯಾಗಿದ್ದಾನೆ. ಶ್ರೀನಿವಾಸ್ ಬೀದರ್‌ನಿಂದ ಬೆಂಗಳೂರಿಗೆ ಬಂದು ಸಾಫ್ಟ್‌ವೇರ್ ಕೋರ್ಸ್ ಮಾಡುತ್ತಿದ್ದರು. ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಪಿಜಿಯಲ್ಲಿ ಶ್ರೀನಿವಾಸ್ ಇದ್ದ ರೂಮ್‌ನಲ್ಲೇ ಈ ದುರ್ಟಘನೆ ನಡೆದಿದೆ. ಮೊಬೈಲ್ ಚಾರ್ಜ್ ಹಾಕಲು ಹೋದಾಗ ಎಲೆಕ್ಟ್ರಿಕ್ ಶಾಕ್ ಹೊಡೆದಿದ್ದು, ಚಾರ್ಜಿಂಗ್ ವೈರ್ ಅಥವಾ ಸ್ವಿಚ್ ಬೋರ್ಡ್‌ನಿಂದ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

  ಅವರು ಬಳಸುತ್ತಿದ್ದ ಮೊಬೈಲ್‌ ಚಾರ್ಜರ್ ವೈರ್ ಕೂಡ ಸ್ವಲ್ಪ ಡ್ಯಾಮೇಜ್ ಆಗಿತ್ತು ಎನ್ನಲಾಗಿದೆ. ಕರೆಂಟ್ ಶಾಕ್ ತಗುಲಿ ಅಂಗಾತ ಬಿದ್ದಿದ್ದ ಶ್ರೀ‌ನಿವಾಸನನ್ನು, ಊಟಕ್ಕೆ ಬಾ ಎಂದು ಕರೆಯಲು ಬಂದ ರೂಂ ಮೆಟ್  ಮೈಮುಟ್ಟಿ ಕರೆಯಲು ಮುಂದಾಗಿದ್ದಾನೆ. ಈ ವೇಳೆ ಆತನಿಗೂ ಶ್ರೀನಿವಾಸ್ ಮೈಯಿಂದ ಕರೆಂಟ್ ಶಾಕ್ ತಗುಲಿದೆ. ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.  ಪಿಜಿ ಸಿಬ್ಬಂದಿ ತಕ್ಷಣ ಬಸವೇಶ್ವರ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿ ತನಿಖೆ ನಡೆಸುತ್ತಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply