ಶಿಕ್ಷಕರ ಕಡ್ಡಾಯ ವರ್ಗಾವಣೆ ವಿರೋಧಿಸಿ ತರಗತಿ ಬಹಿಷ್ಕರಿಸಿದ ವಿಧ್ಯಾರ್ಥಿಗಳು

ಮಂಗಳೂರು ಅಕ್ಟೋಬರ್ 16: ಶಿಕ್ಷಕರ ಕಡ್ಡಾಯ ವರ್ಗಾವಣೆ ವಿರೋಧಿಸಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಮಂಗಳೂರಿನ ಕಸಬಾ ಬೆಂಗರೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ಆರಂಭಿಸಿದ್ದಾರೆ.

ಕಸಬಾ ಬೆಂಗರೆ ಶಾಲೆಯಲ್ಲಿ ಒಟ್ಟು 11 ಶಿಕ್ಷಕರಿದ್ದರು, ಅದರಲ್ಲಿ ಒಬ್ಬ ಶಿಕ್ಷಕರು ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಅಲ್ಲದೆ ಶಾಲೆಯಲ್ಲಿದ್ದ 5 ಮಂದಿ ಖಾಯಂ ಶಿಕ್ಷಕರನ್ನು ಈಗ ಕಡ್ಡಾಯ ವರ್ಗಾವಣೆಗೊಳಿಸಲಾಗಿದೆ. ಆದರೆ ವರ್ಗಾವಣೆಗೊಳ್ಳುತ್ತಿರುವ ಶಿಕ್ಷಕರ ಹುದ್ದೆಗಳಿಗೆ ಯಾವುದೇ ನೇಮಕಾತಿಯನ್ನು ಶಿಕ್ಷಣ ಇಲಾಖೆ ಮಾಡದೇ ಸುಮ್ಮನೆ ಕುಳಿತಿದೆ.

ದಸರಾ ರಜೆ ಮುಗಿಸಿ ಬಂದ ವಿಧ್ಯಾರ್ಥಿಗಳಿಗೆ ತರಗತಿ ಆರಂಭಗೊಳ್ಳುತ್ತಿದ್ದಂತೆ ಶಿಕ್ಷಕರು ಇಲ್ಲದೆ ಇರುವುದನ್ನು ನೋಡಿ ವಿಧ್ಯಾರ್ಥಿಗಳು ಶಿಕ್ಷಣ ಇಲಾಖೆಯ ಕ್ರಮವನ್ನು ಖಂಡಿಸಿ ತರಗತಿಗಳನ್ನು ಬಹಿಷ್ಕರಿಸಿ ಇದೀಗ ಶಾಲೆಯ ಎದುರು ಪ್ರತಿಭಟನೆ ಆರಂಭಿಸಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿರುವ ವಿಧ್ಯಾರ್ಥಿಗಳು 5 ಶಿಕ್ಷಕರ ಕಡ್ಡಾಯ ವರ್ಗಾವಣೆ ರದ್ದುಪಡಿಸಬೇಕೆಂದು ಒತ್ತಾಯಿಸಿದ್ದಾರೆ.

Facebook Comments

comments