ಮತ್ತೆ ಟ್ರೋಲ್ ಪೇಜ್ ಗಳಲ್ಲಿ ಮಿಂಚುತ್ತಿದೆ ಮಂಗಳೂರಿನ ಈ ವಿಶ್ವವಿಖ್ಯಾತ ಪ್ರಸಿದ್ದ ಸ್ಥಳ

ಮಂಗಳೂರು ಅಕ್ಟೋಬರ್ 16: ಮಂಗಳೂರಿನ ಈ ಪ್ರಸಿದ್ದ ಸ್ಥಳ ಮತ್ತೆ ಟ್ರೋಲ್ ಪೇಜ್ ಗಳಲ್ಲಿ ರಾರಾಜಿಸುತ್ತಿದೆ. ಸ್ಥಳೀಯ ಟ್ರೋಲ್ ಪೇಜ್ ಗಳಲ್ಲಿ ಮಾತ್ರ ಕಾಣ ಸಿಗುತ್ತಿದ್ದ ಈ ಸ್ಥಳದ ಪೋಟೋ ಈಗ 3 ಕೋಟಿ ಪಾಲೋವರ್ ಹೊಂದಿರುವ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುವ ಮೂಲಕ ವಿಶ್ವವಿಖ್ಯಾತ ಪಡೆದಿದೆ.

ಇಷ್ಟಕ್ಕೂ ಟ್ರೋಲ್ ಆಗುತ್ತಿರುವ ಪ್ರದೇಶ ಯಾವುದು ಅಂದರೇ ಅದೇ ಮಂಗಳೂರಿನ ಹೃದಯ ಭಾಗದಲ್ಲಿರುವ ಪಂಪ್ ವೆಲ್ ಪ್ಲೈ ಓವರ್, ದಶಕದ ಸಂಭ್ರಮದಲ್ಲಿರುವ ಪಂಪ್ ವೆಲ್ ಪ್ಲೈ ಓವರ್ ಈಗ ಬರೋಬ್ಬರಿ 3 ಕೋಟಿಗೂ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ Sarcasm ಪೇಜ್ ತನ್ನ ಮೀಮ್ ಒಂದಕ್ಕೆ ಪಂಪ್ ವೆಲ್ ಪ್ಲೈ ಓವರ್ ಪೋಟೋ ಬಳಸಿದೆ. ಇತರ ದೇಶಗಳ ರಸ್ತೆಗಳು ಎಂದು ಸುಸಜ್ಜಿತ ರಸ್ತೆಗಳ ಪೋಟೋ ಹಾಕಿದರೆ ನನ್ನ ದೇಶದ ರಸ್ತೆ ಎಂದು ಪಂಪ್ ವೆಲ್ ಪ್ಲೈ ಓವರ್ ಪೋಟೋ ಹಾಕಲಾಗಿದೆ. ಈ ಮೂಲಕ ಮಂಗಳೂರಿನ ಮಾನವನ್ನು ಹರಾಜು ಹಾಕಿದೆ.

ಕಳೆದ 9 ವರ್ಷಗಳಿಂದ ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯಿಂದಾಗಿ ಪಂಪ್ ವೆಲ್ ಪ್ಲೈ ಓವರ್ ಈಗಾಗಲೇ ವಿಶ್ವದಾದ್ಯಂತ ಕುಖ್ಯಾತಿಯನ್ನು ಪಡೆದಿದೆ. ಈ ಮೊದಲು ಸ್ಥಳೀಯ ಮಟ್ಟದ ಮೀಮ್ ಗಳಲ್ಲಿ ಮಾತ್ರ ಪಂಪ್ ವೆಲ್ ಪ್ಲೈ ಓವರ್ ಕಾಣ ಸಿಗುತ್ತಿತ್ತು. ಈಗ ಅತೀ ಹೆಚ್ಚು ಪಾಲೋವರ್ ಇರುವ ಸಾಮಾಜಿಕ ಜಾಲತಾಣಗಳಲ್ಲೂ ಪಂಪ್ ವೆಲ್ ಪ್ಲೈ ಓವರ್ ಗುಣಗಾನ ನಡೆಯುತ್ತಿದೆ.

ಇದಕ್ಕೂ ಮೊದಲು ಪ್ಲೈ ಓವರ್ ನ ಹುಟುಹಬ್ಬದ ಸಂಭ್ರಮವನ್ನು ನಡೆಸಿದ್ದರು, ಅಲ್ಲದೆ ಮಂಗಳೂರಿನ ಅತಿ ಪುರಾತನ ಐತಿಹಾಸಿಕ ಕಟ್ಟಡ ಇದಾಗಿದ್ದು ಪಂಪ್ ವೆಲ್ ಪ್ಲೈಓವರ್ ಗೆ ಭೇಟಿ ನೀಡಿ ಎಂಬ ಮೀಮ್ ಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕೇವಲ 600 ಮೀಟರ್ ಉದ್ದ ಹಾಗೂ 20 ಮೀಟರ್ ಅಗಲದ ಪ್ಲೈ ಓವರ್ ಇದಾಗಿದ್ದು, ಈ ಸೇತುವೆಗೆ 2010ರಲ್ಲಿ ಚಾಲನೆ ದೊರಕಿತ್ತು, ಚಾಲನೆ ದೊರಕಿದ ನಂತರ ನಿಧಾನಗತಿಯ ಕಾಮಗಾರಿಯಿಂದಲೇ ಕುಖ್ಯಾತಿಯನ್ನು ಪಡೆದ ಈ ಪ್ಲೈಓವರ್ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ನವಯುಗ ಕಂಪೆನಿಗೆ ನಾಲ್ಕೈದು ಗಡುವುಗಳನ್ನು ನೀಡಿದ್ದರು, ಕಳೆದ ಚುನಾವಣೆಯ ವೇಳೆ ಫೆಬ್ರವರಿಯಲ್ಲಿ ಮುಗಿಯಲಿದೆ ಎಂದು ಹೇಳಿದ್ದ ಸಂಸದರು, ಚುನಾವಣೆ ಮುಗಿದ ಬಳಿಕ ಮರೆತೆ ಬಿಟ್ಟರು. ನಂತರ ಈಗ ಇನ್ನೊಂದು ದಿನಾಂಕ ನಿಗದಿಯಾಗಿದ್ದು, ಡಿಸೆಂಬರ್ 31ರ ಒಳಗೆ ಕಾಮಗಾರಿ ಮುಗಿದು ಲೋಕಾರ್ಪಣೆಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Facebook Comments

comments