Connect with us

  LATEST NEWS

  ಪುತ್ತೂರಿನ ಪೋಳ್ಯದ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ಕಳ್ಳತನ

  ಪುತ್ತೂರಿನ ಪೋಳ್ಯದ ಲಕ್ಷ್ಮೀ ವೆಂಕಟರಮಣ ಮಠದಲ್ಲಿ ಕಳ್ಳತನ

  ಪುತ್ತೂರು ನವೆಂಬರ್ 9: ಪುತ್ತೂರಿನ ಪೋಳ್ಯದಲ್ಲಿರುವ ಲಕ್ಷ್ಮೀ ವೆಂಕಟರಮಣ ಮಠಕ್ಕೆ ಇಂದು ಮುಂಜಾನೆ ನುಗ್ಗಿದ ಕಳ್ಳರು ಬೆಲೆ ಬಾಳುವ ಮೂರು ಪಂಚಲೋಹದ ವಿಗ್ರಹಗಳನ್ನು ಕಳವು ಮಾಡಿದ್ದಾರೆ.

  ಇಂದು ಬೆಳಿಗ್ಗಿನ ಜಾವ ಸುಮಾರು 1.50 ಈ ಕಳ್ಳತನ ನಡೆದಿರುವ ಸಾಧ್ಯತೆಯಿದ್ದು, ಕಳ್ಳರು ಸುಮಾರು 900 ವರ್ಷಗಳ ಹಿಂದಿನ ಲಕ್ಷ್ಮೀ ವೆಂಕಟರಮಣ, ಗಣಪತಿ ಸೇರಿದಂತೆ ಮೂರು ವಿಗ್ರಹಗಳನ್ನು ಎಗರಿಸಿದ್ದಾರೆ. ಅಲ್ಲದೆ ಇನ್ನು ಮೂರು ವಿಗ್ರಹಗಳಿಗೆ ಹೊದಿಸಿದ ಬೆಳ್ಳಿಯ ಕವಚ, ಪ್ರಭಾವಳಿ ಗಳನ್ನು ಕದ್ದೊಯ್ದಿದ್ದಾರೆ.

  ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಸೇರಿದಂತೆ ಶ್ವಾನದಳವೂ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply