LATEST NEWS
ನಾಯಿ ಮರಿ ಕಚ್ಚಿದ್ದನ್ನು ನಿರ್ಲಕ್ಷ ಮಾಡಿ – ರೇಬಿಸ್ ಗೆ ತುತ್ತಾಗಿ ರಾಜ್ಯ ಮಟ್ಟದ ಕಬ್ಬಡಿ ಆಟಗಾರ ಸಾವು

ಮೀರತ್ ಜುಲೈ 02: ಚರಂಡಿಯಲ್ಲಿ ಬಿದ್ದಿದ್ದ ನಾಯಿ ಮರಿಯ ರಕ್ಷಣೆ ಸಂದರ್ಭ ಅದು ಕಚ್ಚಿದ ಪರಿಣಾಮ ಶಂಕಿತ ರೇಬಿಸ್ ನಿಂದಾಗಿ ಎರಡು ತಿಂಗಳ ನಂತ ರಾಜ್ಯಮಟ್ಟದ ಕಬ್ಬಡಿ ಆಟಗಾರ ಸಾವನಪ್ಪಿದ ಘಟನೆ ಉತ್ತರಪ್ರದೇಶದಲ್ಲಿ ಬುಲಂದ್ ಶಹರ್ ನಲ್ಲಿ ನಡೆದಿದೆ. ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತ ಮತ್ತು ಪ್ರೊ ಕಬಡ್ಡಿ ಲೀಗ್‌ನ ಆಕಾಂಕ್ಷಿಯಾಗಿದ್ದ 22 ವರ್ಷದ ಬ್ರಿಜೇಶ್ ಸೋಲಂಕಿ ಮೃತ ಕಬ್ಬಡಿ ಆಟಗಾರ.
ಎರಡು ತಿಂಗಳ ಹಿಂದೆ ಚರಂಡಿಗೆ ಬಿದ್ದಿದ್ದ ನಾಯಿಮರಿಯನ್ನು ರಕ್ಷಣೆ ಮಾಡಿದ್ದರು. ಈ ವೇಳೆ ಅದು ಅವರಿಗೆ ಕಚ್ಚಿತ್ತು, ಆದರೆ ಸೋಲಂಕಿ ರೇಬಿಸ್ ಲಸಿಕೆಯನ್ನು ತೆಗೆದುಕೊಳ್ಳದೆ ನಿರ್ಲಕ್ಷ ಮಾಡಿದ್ದರು. ಎರಡು ತಿಂಗಳ ಬಳಿಕ ಅವರಿಗೆ ರೇಬಿಸ್ ಲಕ್ಷಣಗಳು ಕಾಣಿಸಲಾರಂಭಿಸಿದ್ದವು. ಜೂನ್ 26 ರಂದು ಏಕಾಏಕಿ ಸೋಲಂಕಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಅವರ ಸ್ಥಿತಿ ಹದಗೆಟ್ಟ ಕಾರಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ನೋಯ್ಡಾದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಸಹೋದರ ಸಂದೀಪ್ ಕುಮಾರ್ ನೀಡಿರುವ ಮಾಹಿತಿ ಪ್ರಕಾರ ಬ್ರಿಜೇಶ್ ಸೊಲಂಕಿ ಇದ್ದಕ್ಕಿದ್ದಂತೆ ನೀರಿಗೆ ಹೆದರುತ್ತಿದ್ದರು ಮತ್ತು ರೇಬೀಸ್ ಲಕ್ಷಣಗಳನ್ನು ತೋರಿಸುತ್ತಿದ್ದರು. ನಂತರ ನೋಯ್ಡಾದಲ್ಲಿ ವೈದ್ಯರು ಅವನಿಗೆ ರೇಬೀಸ್ ಸೋಂಕು ತಗುಲಿರುವ ಸಾಧ್ಯತೆಯನ್ನು ದೃಢಪಡಿಸಿದರು. ನಾಯಿ ಕಚ್ಚಿದ್ದನ್ನು ನಿರ್ಲಕ್ಷ ಮಾಡಿದ್ದಕ್ಕೆ ಉದಯೋನ್ಮುಖ ಕಬ್ಬಡಿ ಆಟಗಾರ ಪ್ರಾಣ ಕಳೆದುಕೊಳ್ಳಬೇಕಾಯಿತು.
A dog lover and state level champion was bitten by a rabies infected stray dog
He tried to save stray dogs by not informing municipal authorities nor got vaccinated and passed away
Stray dogs are menance and they should be moved away from residencespic.twitter.com/cqNevtKv1p
— Farzana (@farzlicioustahe) July 2, 2025