LATEST NEWS
ಸಂಧಿವಾತ(arthritis)ದೊಂದಿಗೆ ಹೋರಾಡುತ್ತಿದ್ದಾಳೆ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್..!!
ಹೈದ್ರಾಬಾದ್ : ದೇಶದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ (saina nehwal) ಸಂಧಿವಾತ ( arthritis)ಸಮಸ್ಯೆಯಿಂದಾಗಿ ತಮ್ಮ ತರಬೇತಿ ಮತ್ತು ಆಟದ ಮೇಲೆ ಪರಿಣಾಮ ಬೀರುತ್ತಿದ್ದು ನಿವೃತ್ತಿಯ ಮಾತುಗಳನ್ನು ಆಡಿದ್ದಾರೆ.
33 ರ ಹರೆಯದ ಸೈನಾ ನೆಹ್ವಾಲ್ ಕಳೆದ ಕೆಲವು ತಿಂಗಳುಗಳಿಂದ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರು ಟೂರ್ನಿಗಳಲ್ಲಿ ಭಾಗವಹಿಸಲು ಆಗುತ್ತಿಲ್ಲ. ಇದರ ನೇರ ಪರಿಣಾಮ ತಮ್ಮ ಅಭ್ಯಾಸದ ಮೇಲೂ ಬಿದ್ದಿದೆ ಎಂದು ನೈಹ್ವಾಲ್ ತಿಳಿಸಿದ್ದಾರೆ. ಸೈನಾ ಬಹುದಿನಗಳಿಂದ ಮೊಣಕಾಲಿನ ಸಮಸ್ಯೆಯಿಂದ ಬಲುತ್ತಿದ್ದಾರೆ. ಇದು ತನ್ನ ಆಟದ ಮೇಲೆ ನೇರ ಪರಿಣಾಮ ಬೀರಬಹುದು. ಅಲ್ಲದೆ ಇದು ತಮ್ಮ ವೃತ್ತಿ ಜೀವನಕ್ಕೂ ತೊಂದರೆ ಆಗಬಹುದು ಎಂದು ಅವರು ನಂಬಿದ್ದಾರೆ. ಮೊಣಕಾಲಿನ ಸಮಸ್ಯೆ ತಮ್ಮ ವೃತ್ತಿ ಜೀವನದ ಮೇಲೆ ಪರಿಣಾಮ ಬೀರುವುದಾದರೆ ಅವರು ಶೀಘ್ರದಲ್ಲೇ ನಿವೃತ್ತಿ ಘೋಷಿಸಬಹುದು ಎಂದು ಸೂಚನೆ ನೀಡಿದ್ದಾರೆ.
ಮೊಣಕಾಲು ತುಂಬಾ ಚೆನ್ನಾಗಿಲ್ಲ, ನನಗೆ ಸಂಧಿವಾತವಿದೆ, ನನ್ನ ಕಾರ್ಟಿಲೆಜ್ ಕೆಟ್ಟ ಸ್ಥಿತಿಗೆ ಹೋಗಿದೆ, ಆಟದ ಅಂಗಳದಲ್ಲಿ 8-9 ಗಂಟೆಗಳ ಕಾಲ ತಳ್ಳುವುದು ತುಂಬಾ ಕಷ್ಟ, ಅಂತಹ ಸ್ಥಿತಿಯಲ್ಲಿ ನೀವು ವಿಶ್ವದ ಅತ್ಯುತ್ತಮ ಆಟಗಾರರಿಗೆ ಹೇಗೆ ಸವಾಲು ಹಾಕುತ್ತೀರಿ? ನಾನು ಅದನ್ನು ಎಲ್ಲೋ ಒಪ್ಪಿಕೊಳ್ಳಬೇಕು ? ಏಕೆಂದರೆ ಅತ್ಯುನ್ನತ ಮಟ್ಟದ ಆಟಗಾರರೊಂದಿಗೆ ಆಡಲು ಮತ್ತು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲು 2 ಗಂಟೆಗಳ ತರಬೇತಿಯು ಸಾಕಾಗುವುದಿಲ್ಲ” ಎಂದು ಭಾರತದ ಚೆಫ್ ಡಿ ಮಿಷನ್ ಆಗಿದ್ದ ಗಗನ್ ನಾರಂಗ್ ಅವರ ಹೌಸ್ ಆಫ್ ಗ್ಲೋರಿ ಪಾಡ್‌ಕ್ಯಾಸ್ಟ್‌ನಲ್ಲಿ ಸೈನಾ ಹೇಳಿದರು. ಲಂಡನ್ ಒಲಿಂಪಿಕ್ಸ್‌ನಲ್ಲಿ ಸೈನಾ ನೆಹ್ವಾಲ್ ಭರ್ಜರಿ ಪ್ರದರ್ಶನ ನೀಡಿದ್ದರು. ಅಲ್ಲದೆ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ದೇಶದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯನ್ನು ಉತ್ತೇಜಿಸಲು ಶ್ರಮಿಸಿದ್ದರು. ಈ ಮೂಲಕ ಭಾರತದ ಪರ ಒಲಿಂಪಿಕ್ಸ್‌ನಲ್ಲಿ ಪದಕ ಸಾಧನೆಯನ್ನು ಮಾಡಿದ ಮೊದಲ ಬ್ಯಾಡ್ಮಿಂಟನ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
You must be logged in to post a comment Login