UDUPI
ತಮಿಳುನಾಡು ನಮ್ಮನ್ನ ಫಾಲೋ ಮಾಡಬೇಕು ನಾವಲ್ಲ….
ಕರ್ನಾಟಕದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ರದ್ದಿಲ್ಲ….
ಉಡುಪಿ: ಮಕ್ಕಳ ಭವಿಷ್ಯಕ್ಕಾಗಿ ನಾವು ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದ್ದು, ತಮಿಳುನಾಡಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ರದ್ದು ಮಾಡಿದ್ದರೆ. ಅದನ್ನೇ ನಾವು ಫಾಲೋ ಮಾಡಬೇಕು ಎಂದೇನಿಲ್ಲ. ಬೇಕಾದರೆ ಅವರು ನಮ್ಮನ್ನ ಫಾಲೋ ಮಾಡಲಿ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ನಾವು ಪರೀಕ್ಷೆಯನ್ನು ರದ್ದು ಮಾಡುವ ಸ್ಥಿತಿಯಲ್ಲಿ ಇಲ್ಲ. ಪರೀಕ್ಷೆ ನಡೆಸುತ್ತೇವೆ ಎಂದುರು, ಈಗಾಗಲೇ ಪರೀಕ್ಷೆ ಸಂಬಂಧಿಸಿದಂತೆ ತಯಾರಿಯಲ್ಲಿ ನಾವು ಬಹಳ ಮುಂದೆ ಹೋಗಿದ್ದೇವೆ. ಮಕ್ಕಳ ಹಿತಕ್ಕೆ ಎಚ್ಚರಿಕೆ ಕ್ರಮವನ್ನು ಕೈಗೊಳ್ಳುತ್ತೇವೆ. ಕೇಂದ್ರ ಮಾನವ ಸಚಿವಾಲಯದಲ್ಲಿ ಚರ್ಚೆ ನಡೆಸಿದ್ದೇವೆ. ಮಕ್ಕಳಲ್ಲಿ ಶಿಕ್ಷಕರಲ್ಲಿ ಗೊಂದಲ ಮೂಡುವುದು ಬೇಡ. ಮಾಧ್ಯಮಗಳ ಮೂಲಕ ನಾನು ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ಎಲ್ ಕೆಜಿ, ಯು ಕೆಜಿಗೆ ಆನ್ ಲೈನ್ ಶಿಕ್ಷಣ ಒಳಿತಲ್ಲ. ಪ್ರಾಥಮಿಕ ಮಕ್ಕಳಿಗೂ ಆನ್ ಲೈನ್ ಶಿಕ್ಷಣ ಒಳಿತಲ್ಲ. ಮಕ್ಕಳ ಮೇಲೆ ಇದು ಕೆಟ್ಟ ಪರಿಣಾಮ ಬೀರುತ್ತದೆ. ನಿನ್ನೆ ನಡೆಸಿದ್ದ ಸಭೆ ಅಪೂರ್ಣವಾಗಿದೆ. ನಾಳೆ ವಿಸ್ತ್ರತ ಚರ್ಚೆ ನಡೆಸಿ ತೀರ್ಮಾನ ಮಾಡುತ್ತೇವೆ. ಚಿಕ್ಕ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಆರೋಗ್ಯಕರ ಅಲ್ಲ. ಆನ್ ಲೈನ್ ಶಿಕ್ಷಣ ಕೊಡುವುದು ಹಣ ಮಾಡುವ ದಾರಿ ಆಗಬಾರದು ಎಂದು ಅಭಿಪ್ರಾಯಪಟ್ಟರು.