Connect with us

LATEST NEWS

ಮಹಾರಾಷ್ಟ್ರದಿಂದ ಬಂದವರಿಗೆ ಇನ್ನು ಮನೆಯಲ್ಲೇ ಕ್ವಾರಂಟೈನ್……

ಆರೋಗ್ಯ ಇಲಾಖೆ, ಆರೋಗ್ಯ ಸಚಿವರಿಂದ ಗೊಂದಲದ ಹೇಳಿಕೆಗಳು

ಉಡುಪಿ ಜೂನ್ 9: ಕೊರೊನಾ ವಿಚಾರದಲ್ಲಿ ರಾಜ್ಯ ಸರಕಾರದ ಗೊಂದಲ ಹೇಳಿಕೆಗಳು ಇನ್ನು ಮುಂದುವರೆದಿದೆ. ನಿನ್ನೆಯಷ್ಟೇ ಮಹಾರಾಷ್ಟ್ರದಿಂದ ಬಂದವರಿಗೆ 7 ದಿನಗಳ ಕಾಲ ಸರ್ಕಾರಿ ಕ್ವಾರಂಟೈನ್ ಕಡ್ಡಾಯ ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದ್ದರೆ. ಇಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಇನ್ನು ಮುಂದೆ ಸರ್ಕಾರಿ ಕ್ವಾರಂಟೈನ್ ಇರಲ್ಲ ಎಂದು ಹೇಳಿದ್ದಾರೆ.


ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಮಹಾರಾಷ್ಟ್ರದಿಂದ ಬಂದವರಿಗೆ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ. ಇನ್ನು ಮುಂದೆ ಸಾಂಸ್ಥಿಕ ಕ್ವಾರಂಟೈನ್ ಇರೋದಿಲ್ಲ. ವ್ಯಕ್ತಿಯ ಮನೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡುತ್ತೇವೆ. ಸೀಲ್ ಮಾಡಿದ ಮೇಲೆ ಆತ ಮನೆಯಲ್ಲೇ ಇರಬೇಕು. ಹೊರಬಂದ್ರೆ ಕೇಸ್ ಹಾಕುವ ತೀರ್ಮಾನ ಮಾಡಿದ್ದೇವೆ. ಈ ತೀರ್ಮಾನವನ್ನು ರಾಜ್ಯ ಮಟ್ಟದಲ್ಲೇ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಈ ಕುರಿತಂತೆ ಜಿಲ್ಲಾಧಿಕಾರಿಗೆ ಸಂಪೂರ್ಣ ಅಧಿಕಾರ ಕೊಡಲಾಗಿದೆ. ಸೀಲ್ ಡೌನ್ ಇದ್ದವರು ಹೊರಗೆ ಬಂದರೆ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ ಅವರು ಕ್ವಾರಂಟೈನ್ ನಲ್ಲಿರುವ ನಿಗಾಕ್ಕೆ ಪೊಲೀಸ್, ಹೋಂ ಗಾರ್ಡ್ ಗಳನ್ನು ನೇಮಿಸಲಾಗುತ್ತೆ. ತುಂಬಾ ಬಡವರಿದ್ದರೆ ಆ ಮನೆಗೆ ದೇವಸ್ಥಾನದ ಮೂಲಕ ಕಿಟ್ ಒದಗಿಸಲಾಗುವುದು. ರೋಗ ಲಕ್ಷಣ ಕಂಡು ಬಂದರೆ ಟೆಸ್ಟ್ ಮಾಡುತ್ತೇವೆ ಎಂದು ಹೇಳಿದ್ದಾರೆ.

 


ಇನ್ನು ಅಪಾರ್ಟ್ ಮೆಂಟ್ ಗಳಲ್ಲಿ ಕೊರೊನಾ ಪ್ರಕರಣ ಕಂಡು ಬಂದರೆ ಇಡೀ ಸೀಲ್ ಮಾಡಲ್ಲ. ಒಂದು ಮನೆಯನ್ನು ಮಾತ್ರ ಸೀಲ್ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ರಾಯಚೂರಿನಲ್ಲಿ ಕೋವಿಡ್ ಸೋಂಕಿತೆ ಗರ್ಭಪಾತ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ರಾಮುಲು ಈ ಕುರಿತಂತೆ ಜಿಲ್ಲಾಡಳಿತ ಮತ್ತು ಡಿಎಚ್ ಒ ಜೊತೆ ಮಾತನಾಡಿದ್ದೇನೆ.

ತಡವಾಗಿ ಚಿಕಿತ್ಸೆ ನೀಡಿದ ವೈದ್ಯರನ್ನು ತಕ್ಷಣ ಸಸ್ಪೆಂಡ್ ಮಾಡಲು ಆದೇಶ ನೀಡಿದ್ದೇನೆ. ಕೊರೊನಾ ಬಂದಿರರಲಿ ಬಾರದಿರಲಿ ಅದು ಪ್ರಶ್ನೆಯೇ ಅಲ್ಲ ಆದರೆ ತಡವಾಗಿ ಟ್ರೀಟ್ ಮೆಂಟ್ ಮಾಡಿದ್ದು ದೊಡ್ಡ ತಪ್ಪು . ಈ ತರದ ಘಟನೆ ಮುಂದುವರೆಯಬಾರದು ಎಂದು ಸಸ್ಪೆಂಡ್ ಮಾಡಲಾಗಿದೆ ಉಡುಪಿಯಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ್ದಾರೆ.