Connect with us

    LATEST NEWS

    ಗುಂಡಿನ ನಶೆಯಲ್ಲಿ ಬಾತ್ ಟಬ್ ಗೆ ಜಾರಿ ಬಿದ್ದು ಸಾವನಪ್ಪಿದ್ದ ಬಾಲಿವುಡ್ ನಟಿ ಶ್ರೀದೇವಿ

    ಗುಂಡಿನ ನಶೆಯಲ್ಲಿ ಬಾತ್ ಟಬ್ ಗೆ ಜಾರಿ ಬಿದ್ದು ಸಾವನಪ್ಪಿದ್ದ ಬಾಲಿವುಡ್ ನಟಿ ಶ್ರೀದೇವಿ

    ಮುಂಬೈ ಫೆಬ್ರವರಿ 26: ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಸಾವಿನ ಸುತ್ತ ಇದ್ದ ಅನುಮಾನಗಳಿಗೆ ಬ್ರೇಕ್ ಬಿದ್ದಿದೆ. ಇದೀಗ ಪೋಸ್ಟ್ ಮಾರ್ಟಂ ರಿಪೋರ್ಟ್ ಹೊರ ಬಿದ್ದಿದ್ದು, ಅದರಲ್ಲಿ ಆಘಾತಕಾರಿ ಸಂಗತಿಗಳು ಹೊರ ಬೀಳುತ್ತಿದ್ದು, ಆರಂಭಿಕ ಮಾಹಿತಿಯಂತೆ ಶ್ರೀದೇವಿ ಅವರು ಹೃದಯಾಘಾತದಿಂದ ಸತ್ತಿದ್ದರು ಎಂದು ಹೇಳಲಾಗಿತ್ತು.

    ಆದರೆ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಪ್ರಕಾರ ಶ್ರೀದೇವಿ ಹೋಟೆಲಿನ ಸ್ನಾನದ ಕೋಣೆಯಲ್ಲಿ ನೀರು ತುಂಬಿದ್ದ ಬಾತ್ ಟಬ್ ನಲ್ಲಿ ಅಕಸ್ಮಾತಾಗಿ ಬಿದ್ದು ಮುಳುಗಿ ಸಾವನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಫೋರೆನ್ಸಿಕ್ ರಿಪೋರ್ಟ್ ಪ್ರಕಾರ ಶ್ರೀದೇವಿ ಅವರ ದೇಹದಲ್ಲಿ ಆಲ್ಕೋಹಾಲ್ ನ ಅಂಶ ಕಂಡು ಬಂದಿದೆ.

    ಈ ಹಿನ್ನಲೆಯಲ್ಲಿ ಶ್ರೀದೇವಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನುವ ಸುದ್ದಿ ಸುಳ್ಳಾಗಿದೆ. ಶ್ರೀದೇವಿಯವರ ದೇಹದಲ್ಲಿ ಮದ್ಯದ ಅಂಶ ಕಂಡುಬಂದಿದ್ದು, ಅವರು ಗುಂಡಿನ ನಶೆಯಲ್ಲಿದ್ದರು ಎಂಬುದು ಬಹಿರಂಗವಾಗಿದೆ.

    ಅವರ ಸಾವಿನ ಕುರಿತು ನೀಡಲಾಗಿರುವ ಪ್ರಥಮ ಮಾಹಿತಿ ಕೂಡ ಇದನ್ನೇ ಹೇಳುತ್ತಿದೆ. ಹೋಟೆಲಿನಲ್ಲಿನ ಬಾತ್ ಟಬ್ ಗೆ ಬೀಳುವ ಮುನ್ನವೇ ಶ್ರೀದೇವಿಯವರು ಪ್ರಜ್ಞೆ ಕಳೆದುಕೊಂಡಿದ್ದರೆಂಬ ಮಹತ್ವದ ಮಾಹಿತಿಯನ್ನು ಪೋಸ್ಟ್ ಮಾರ್ಟಂ ವರದಿ ಹೇಳುತ್ತಿದೆ. ಈ ರೀತಿಯ ವರದಿಗಳಿಂದಾಗಿ ಹೃದಯಾಘಾತವಾಗಿ ಅವರು ಅಸುನೀಗಿದರು ಎಂಬ ವ್ಯಾಖ್ಯಾನವೇ ಫೋರೆನ್ಸಿಕ್ ವರದಿಯಿಂದ ಉಲ್ಟಾಪುಲ್ಟಾ ಆಗಿದೆ

    Share Information
    Advertisement
    Click to comment

    Leave a Reply

    Your email address will not be published. Required fields are marked *