LATEST NEWS
ಪಾಲಿಕೆ ಸದಸ್ಯ ಗಣೇಶ್ ಕುಲಾಲ್ ನೇತೃತ್ವದಲ್ಲಿ ಕಡಲ ಕಿನಾರೆಯಲ್ಲಿ ಹಾರಾಡಿದ ಶ್ರೀರಾಮನ ಗಾಳಿಪಟ

ಮಂಗಳೂರು ಜನವರಿ 22: ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠಾ ಕಾರ್ಯಕ್ರಮ ನಡೆಯುತ್ತಿದ್ದು, ಇಡೀ ದೇಶದಲ್ಲೇ ಇಂದು ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಂಗಳೂರಿನಲ್ಲೂ ಬಹುತೇಕ ಎಲ್ಲಾ ದೇವಸ್ಥಾನಗಳಲ್ಲೂ ಇಂದು ಶ್ರೀರಾಮನ ಪ್ರತಿಷ್ಠೆ ಹಿನ್ನಲೆ ವಿಶೇಷ ಪೂಜೆಗಳು ನಡೆಯುತ್ತಿವೆ.
ಈ ನಡುವೆ ಅಯೋಧ್ಯಾಪತಿ ಶ್ರೀ ರಾಮನ ಪ್ರತಿಷ್ಟೇಯ ಮಹೋತ್ಸವದ ಶುಭ ಸಂಧರ್ಭದಲ್ಲಿ ಮನಪಾ ಸದಸ್ಯರಾದ ಗಣೇಶ್ ಕುಲಾಲ್ ರವರ ಅವರು ಕಲಾವಿದ ಶಶಿರಾಜ್ ಉರ್ವ ರಚಿಸಿದ ಶ್ರೀರಾಮನ ಭವ್ಯವಾದ ಕಲಾಕೃತಿಯ ಗಾಳಿಪಟವನ್ನು ಸಮುದ್ರ ಕಿನಾರೆಯಲ್ಲಿ ಹಾರಿಸಿ ಅಯೋಧ್ಯೆಯ ರಾಮ ಪ್ರಾಣಪ್ರತಿಷ್ಠೆ ಕಾರ್ಯಕ್ರಮವನ್ನು ಸಂಭ್ರಮಿಸಿದ್ದಾರೆ.
