LATEST NEWS
ಪ್ರತಿಕೂಲ ಹವಮಾನ :ಶ್ರೀಲಂಕಾ ಪ್ರಧಾನಿ ಕೊಲ್ಲೂರು ಭೇಟಿ ರದ್ದು
ಉಡುಪಿ, ಅಗಸ್ಟ್ 27 : ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮ್ ಸಿಂಘೇ ಅವರ ಕೊಲ್ಲೂರು ಕಾರ್ಯಕ್ರಮ ರದ್ದಾಗಿದೆ. ಇಂದು ಭಾನುವಾರ ಬೆಂಗಳೂರು ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಆಗಮಿಸಬೇಕಾಗಿತ್ತು. ಆದರೆ ಪ್ರತಿಕೂಲ ಹವಮಾನದಿಂದ ಕೊನೆ ಕ್ಷಣ ಪ್ರವಾಸ ರದ್ದಾಗಿದೆ. ಶ್ರೀಲಂಕಾ ಪ್ರಧಾನಿ ವಿಕ್ರಮ್ ಸಿಂಘೇ ಅವರ ಕೊಲ್ಲೂರು ಮೂಕಾಂಬಿಕ ದೇವಾಲಯದ ಇಂದಿನ ಕಾರ್ಯಕ್ರಮಕ್ಕೆ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ, ಪೋಲಿಸ್ ಇಲಾಖೆ ಸಕಲ ಸಿದ್ದತೆಗಳನ್ನು ಮಾಡಿತ್ತು. ಶಿರೂರಿನಲ್ಲಿ ಹೆಲಿಪ್ಯಾಡಿನಲ್ಲಿ ಸುರಕ್ಷತೆಯೊಂದಿಗೆ ಬೇಕಾದ ಸಕಲ ಸಿದ್ದತೆಗಳನ್ನು ಮಾಡಿತ್ತು. ದೇವಿ ಮೂಕಾಂಬಿಕೆಗೆ ವಿಶೇಷ ಪೂಜೆ ನೆರವೇರಿಸಿ ಪ್ರಸಾದ ಸ್ವೀಕರಿಸಲಿದ್ದ ವಿಕ್ರಮ್ ಸಿಂಘೇ ದೇವಸ್ಥಾನದಲ್ಲಿ ನಡೆಯಲಿರುವ ಚಂಡಿಕಾ ಹೋಮದಲ್ಲಿ ಪಾಲ್ಗೊಳ್ಳಲಿದ್ದರು. ವಿದೇಶದ ಪ್ರಧಾನಿಯೋರ್ವರು ಚಂಡಿಕಾ ಹೋಮದಲ್ಲಿ ಪಾಲ್ಗೊಳ್ಳುವುದು ಇದೇ ಮೊದಲ ಬಾರಿಯಾಗಿದ್ದರಿಂದ ದೇವಸ್ಥಾನ ಆಡಳಿತ ಮಂಡಳಿ ಸಾಕಷ್ಟು ಸಿದ್ದತೆಗಳನ್ನು ಮಾಡಿತ್ತು.ಮುಂಜಾನೆಯಿಂದ ಕೊಲ್ಲೂರು ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿತ್ತು. ಅದರೆ ಕರಾವಳಿಯಲ್ಲಿ ಕಳೆದ 3 ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ರಾನಿಲ್ ವಿಕ್ರಮಸಿಂಘೇ ಅವರ ಹೆಲಿಕಾಪ್ಟರ್ ಶಿರೂರಿನಲ್ಲಿ ಇಳಿಯಲು ಅಸಾಧ್ಯವಾದುದರಿಂದ ಕೊನೆ ಕ್ಷಣದಲ್ಲಿ ಪ್ರವಾಸ ರದ್ದಾಗಿದೆ. ರಾನಿಲ್ ವಿಕ್ರಮಸಿಂಘೇ ಶನಿವಾರ ಕೊಲ್ಲೂರಿಗೆ ಬರಬೇಕಾಗಿತ್ತು, ಆದರೆ ಭದ್ರತೆಯ ಕಾರಣ ಅದನ್ನು ಇಂದು ಭಾನುವಾರಕ್ಕೆ ಮುಂದೂಡಲಾಗಿತ್ತು. ಆದರೆ ಇಂದು ಕೂಡ ಸಾಧ್ಯವಾಗದಿರುವುದರಿಂದ ಮುಂದಿನ ದಿನ ಇನ್ನಷ್ಟೆ ಗೊತ್ತಾಗಬೇಕಿದೆ.