ಮುಂಬಯಿ, ಅಗಸ್ಟ್ 27 : ವಿಘ್ನ ನಿವಾರಕ ಗಣೇಶ ಹಬ್ಬ ಆಚರಿಸಿದ್ದಕ್ಕೆ ಖ್ಯಾತ ಬಾಲಿವುಡ್ ನಟ ಸಾಹಿಲ್ ಖಾನ್ ಗೆ ಮತಾಂಧ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಕೊಟ್ಟ ಬೆದರಿಕೆಗೆ ಬಾಲಿವುಡ್ ನಟ ಖಡಕ್ ಪ್ರತ್ಯುತ್ತರ ನೀಡಿದ್ದಾರೆ. 41 ನೇ ಹರೆಯದ ಬಾಲಿವುಡ್ ನಟ ಸಾಹಿಲ್ ಖಾನ್ ಕೊಟ್ಟ ಉತ್ತರ ಹೀಗಿದೆ ” ಮೊದಲು ನಾನು ಭಾರತೀಯ. ಆನಂತರ ನಾನು ಮುಸ್ಲೀಮನಾಗಿ ಹುಟ್ಟಿದೆ. ಮೊದಲು ನನಗೆ ಅಹಾರ, ಪ್ರೀತಿ,ಹೆಸರು, ಗೌರವ ನೀಡಿದ ಭಾರತ ದೇಶವನ್ನು ಗೌರವಿಸುವುದನ್ನು ಕಲಿ ಅಥವಾ ಬೇರೆ ಮುಸ್ಲೀಂ ರಾಷ್ಟ್ರಕ್ಕೆ ಹೋಗಿ ಅಲ್ಲಿ ನಿನ್ನ ಅದೃಷ್ಟ ಪರೀಕ್ಷೆ ಮಾಡು. ನಿನ್ನ ಋಣಾತ್ಮಕ ದ್ವೇಷದ ಆಟವನ್ನು ನನ್ನ ಬಳಿ ಆಡಬೇಡ, ನನ್ನ ಸಾಮಾಜಿಕ ಜಾಲತಾಣವನ್ನು ನೀನು ಫಾಲೋ ಮಾಡುವುದು ಬೇಡ.ನಿನ್ನಂತವರ ಅವಶ್ಯಕತೆ ನನಗೆ ಇಲ್ಲ, ಮೊದಲು ನೀನು ತಾಯಿ ನೆಲವನ್ನು ಗೌರವಿಸುವುದನ್ನು ಕಲಿ. ನಂತರ ಧರ್ಮ-ಧಾರ್ಮಿಕ ಗ್ರಂಥಗಳನ್ನು ಓದು. ಅದು ಕೂಡ ಇದನ್ನೇ ಹೇಳುತ್ತದೆ ” ಎಂದು ಎದುರಾಳಿಯನ್ನು ಸರಿಯಾಗಿ ತದಕಿದ್ದಾರೆ ಮತ್ತು  ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ. ಸಾಹಿಲ್ ಖಾನ್ ನ ಈ ದೇಶ ಪ್ರೇಮ-ಭ್ರಾತೃತ್ವದ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

Facebook Comments

comments