LATEST NEWS
88ರ ಇಳಿವಯಸ್ಸಿನಲ್ಲೂ ವೇದಿಕೆ ಮೇಲೆ ನಿಂತು ಮಾತನಾಡಿದ – ನಾಡೋಜಾ ಎಂ. ಚಿದಾನಂದ ಮೂರ್ತಿ
88ರ ಇಳಿವಯಸ್ಸಿನಲ್ಲೂ ವೇದಿಕೆ ಮೇಲೆ ನಿಂತು ಮಾತನಾಡಿದ – ನಾಡೋಜಾ ಎಂ. ಚಿದಾನಂದ ಮೂರ್ತಿ
ಮಂಗಳೂರು ನವೆಂಬರ್ 29: ಮಂಗಳೂರಿನಲ್ಲಿ ನಡೆಯುತ್ತಿರುವ ಎರಡು ದಿನಗಳ ಮಂಗಳೂರು ಲಿಟ್ ಫೆಸ್ಟ್ ಸಾಹಿತ್ಯೋತ್ಸವ ಸಮಾರಂಭದಲ್ಲಿ ಹಿರಿಯ ಸಂಶೋಧಕ ನಾಡೋಜಾ ಎಂ. ಚಿದಾನಂದ ಮೂರ್ತಿಯವರಿಗೆ ಜೀವಮಾನದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
88 ವರ್ಷ ವಯಸ್ಸಾದರೂ ವೇದಿಕೆಯ ಮೇಲೆ ನಿಂತು ಮಾತನಾಡಿದ ಹಿರಿಯ ಸಂಶೋಧಕ ಎಂ. ಚಿದಾನಂದ ಮೂರ್ತಿ ಟಿಪ್ಪು ಸುಲ್ತಾನ ಒರ್ವ ಮತಾಂಧನಾಗಿದ್ದು, ಆತನ ಜಯಂತಿಯನ್ನು ರದ್ದು ಪಡಿಸಿರುವುದು ರಾಜ್ಯ ಸರಕಾರದ ಉತ್ತಮ ನಡೆ ಎಂದು ಚಿದಾನಂದ ಮೂರ್ತಿ ಇದೇ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಟಿಪ್ಪು ಸುಲ್ತಾನ್ ತನ್ನ ಸೇನಾಧಿಕಾರಿಗೆ ಬರೆದ ಪತ್ರದಲ್ಲಿ ಅನ್ಯಮತೀಯರನ್ನು ಕೊಲ್ಲುವಂತೆ ಆದೇಶಿಸಿದ್ದ ಎಂದ ಅವರು ಈ ಬಗ್ಗೆ ಟಿಪ್ಪು ಸುಲ್ತಾನ್ ಬರೆದ ಪತ್ರವೂ ಲಭ್ಯವಿದೆ ಎಂದರು.
ಭಾರತ ಯಾವತ್ತೂ ಯಾರ ಮೇಲೆಯೂ ಪ್ರಭುತ್ವ ಸಾಧಿಸುವ ಯತ್ನ ಮಾಡಿಲ್ಲ. ಆದರೆ ಕೆಲವು ಧರ್ಮಗಳು ಇದನ್ನು ಇಂದಿಗೂ ಮಾಡುತ್ತಿದೆ ಎಂದ ಅವರು ಕಾಶ್ಮೀರದಿಂದ 370 ವಿಧಿಯನ್ನು ಹಿಂಪಡೆಯುವ ಮೂಲಕ ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಮಾಡಿದ ಕೇಂದ್ರ ಸರಕಾರಕ್ಕೆ ಅವರು ಇದೇ ಸಂದರ್ಭದಲ್ಲಿ ಧನ್ಯವಾದ ಹೇಳಿದರು.
ಎರಡು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿ ವಿವಿಧ ವಿಚಾರಗಳ ಕುರಿತಂತೆ ದೇಶದ ಗಣ್ಯ ವ್ಯಕ್ತಿಗಳ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ. ಅಲ್ಲದೆ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕ ಮಳಿಗೆ, ಕರಕುಶಲ ಮಳಿಗೆ ಸಮ್ಮೇಳನಕ್ಕೆ ಬರುವವರ ಆಕರ್ಷಣೆಯ ಕೇಂದ್ರ ಬಿಂದುವೂ ಆಗಲಿದೆ.