Connect with us

MANGALORE

ಮಂಗಳೂರು ಲಿಟ್ ಫೆಸ್ಟ್ 2019 ಗೆ ಚಾಲನೆ

ಮಂಗಳೂರು ಲಿಟ್ ಫೆಸ್ಟ್ 2019 ಗೆ ಚಾಲನೆ

ಮಂಗಳೂರು ನವೆಂಬರ್ 29: ಮಂಗಳೂರಿನಲ್ಲಿ ನಡೆಯಲಿರುವ ಎರಡು ದಿನಗಳ ಮಂಗಳೂರು ಲಿಟ್ ಫೆಸ್ಟ್ ಗೆ ಚಾಲನೆ ದೊರೆತಿದೆ. ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಫೆಸ್ಟ್ ಗೆ ಚಾಲನೆ ನೀಡಿದರು.

ಎರಡು ದಿನಗಳ ಕಾಲ ನಡೆಯಲಿರುವ ಈ ಸಮ್ಮೇಳನದಲ್ಲಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ವ್ಯಕ್ತಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ವಿವಿಧ ವಿಚಾರಗಳ ಬಗ್ಗೆ ಉಪನ್ಯಾಸ ಹಾಗೂ ಸಂವಾದ ನಡೆಯಲಿದೆ.

ಮಂಗಳೂರು ಲಿಟ್ ಫೆಸ್ಟ್ ನ ಎರಡನೇ ಆವೃತಿಯ ಸಾಹಿತ್ಯ ಉತ್ಸವಕ್ಕೆ ಇಂದು ಚಾಲನೆ ನೀಡಲಾಯಿತು. ಸಾಹಿತಿ ಸಂಶೋಧಕ ಚಂದ್ರಶೇಖರ ಕಂಬಾರ ಸಮ್ಮೇಳನಕ್ಕೆ ಚಾಲನೆ ನೀಡಿದರು. ದೇಶದಲ್ಲಿ ಜಾರಿಗೆ ಬಂದ ಮೆಕಾಲೆ ಶಿಕ್ಷಣ ವ್ಯವಸ್ಥೆಯಿಂದಾಗಿ ದೇಶದ ಸಂಸ್ಕೃತಿಗೆ ಭಾರೀ ದೊಡ್ಡ ಹೊಡೆತ ಬಿದ್ದಿದೆ.

ಶಾಸ್ತ್ರ ಜ್ಞಾನವನ್ನು ಮೂಡನಂಬಿಕೆ ಎನ್ನುವ ರೀತಿಯಲ್ಲಿ ಬಿಂಬಿಸುವ ಕಾರ್ಯ ಇಂದಿನ ಶಿಕ್ಷಣ ವ್ಯವಸ್ಥೆಯ ಮೂಲಕ ನಡೆಯುತ್ತಿದೆ ಎಂದ ಅವರು ದೇಶ ಇಂದು ಇಂಗ್ಲಿಷ್ ದಾಸ್ಯದಿಂದಲೇ ಬದುಕಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ ಎಂದರು. ಅತಿಯಾದ ಇಂಗ್ಲಿಷ್ ಭಾಷೆಯ ವ್ಯಾಮೋಹ ಪ್ರಾದೇಶಿಕ ಭಾಷೆಯ ಬೆಳವಣಿಗೆಗೆ ಮುಳುವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಆತಂಕ ವ್ಯಕ್ತಪಡಿಸಿದರು.

Facebook Comments

comments