Connect with us

  LATEST NEWS

  ಗಂಡನ ಜೊತೆ ಬೈಕ್ ಟೂರ್ ನಲ್ಲಿದ್ದ ಸ್ಪ್ಯಾನಿಷ್ ಮಹಿಳೆ ಮೇಲೆ ಗ್ಯಾಂಗ್ ರೇಪ್

  ನವದೆಹಲಿ ಮಾರ್ಚ್ 02: ಪತಿಯೊಂದಿಗೆ ಬೈಕ್ ಟೂರ್ ನಲ್ಲಿದ್ದ ಸ್ಪ್ಯಾನಿಷ್ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಜಾರ್ಖಂಡ್‌ನ ದುಮ್ಕಾ ಜಿಲ್ಲೆಯಲ್ಲಿ ನಡೆದಿದೆ. ದುಮ್ಕಾದ ಹನ್ಸ್ದಿಹಾ ಪ್ರದೇಶದಲ್ಲಿ ಶುಕ್ರವಾರ ತಡರಾತ್ರಿ ದಂಪತಿಗಳು ತಾತ್ಕಾಲಿಕ ಟೆಂಟ್‌ನಲ್ಲಿ ರಾತ್ರಿ ಕಳೆಯಲು ನಿರ್ಜನ ಸ್ಥಳದಲ್ಲಿ ನಿಂತಾಗ ಈ ಘಟನೆ ಸಂಭವಿಸಿದೆ.


  ಪ್ರವಾಸಿ ದಂಪತಿಗಳು ದ್ವಿಚಕ್ರ ವಾಹನದಲ್ಲಿ ಬಾಂಗ್ಲಾದೇಶದಿಂದ ದುಮ್ಕಾ ತಲುಪಿ ಬಿಹಾರ ಮೂಲಕ ನೇಪಾಳಕ್ಕೆ ತೆರಳುತ್ತಿದ್ದರು ಎಂದು ವರದಿಯಾಗಿದೆ. ಈ ವೇಳೆ ಕತ್ತಲಾದ ಕಾರಣ ದುಮ್ಕಾದಲ್ಲಿ ಟೆಂಟ್‌ ಹಾಕಿ ರಾತ್ರಿ ಕಳೆಯಲು ಹಂಸ್ದಿಹಾ ಮಾರುಕಟ್ಟೆ ಬಳಿ ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಅಪರಿಚಿತರ ತಂಡ ದಂಪತಿಗಳನ್ನು ಬೆದರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದಾರೆ. ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply