FILM
ಕೊರೊನಾ ಗೆದ್ದ ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ

ಚೆನ್ನೈ: ಕಳೆದೊಂದು ತಿಂಗಳಿನಿಂದ ಚೆನ್ನೈ ಎಂಜಿಎಂ ಆಸ್ಪತ್ರೆಯಲ್ಲಿ ಕರೊನಾ ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿನ್ನಲೆ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ ಅವರ ಪುತ್ರ ಎಸ್ಪಿ ಚರಣ್.
ತಂದೆಯ ಆರೋಗ್ಯದ ಕುರಿತು ವಿಡಿಯೋ ಮೂಲಕ ಮಾಹಿತಿ ನೀಡಿರುವ ಅವರು, ಇಷ್ಟು ದಿನ ಅಪ್‍ಡೇಟ್ ನೀಡದ್ದಕ್ಕೆ ದಯವಿಟ್ಟು ಕ್ಷಮಿಸಿ, ವೀಕೆಂಡ್ ಬಳಿಕ ನಮಗೆ ಗುಡ್ ನ್ಯೂಸ್ ಲಭ್ಯವಾಗಿದ್ದು, ಶ್ವಾಸಕೋಶಗಳು ಗುಣಮುಖವಾಗುತ್ತಿವೆ. ಆದರೆ ಕೆಲ ಸಮಯವನ್ನು ತೆಗೆದುಕೊಳ್ಳುತ್ತವೆ. ಮತ್ತೊಂದು ವಿಚಾರವೆಂದರೆ ನಮ್ಮ ತಂದೆ, ತಾಯಿಯ ವಿವಾಹ ವಾರ್ಷಿಕೋತ್ಸವವನ್ನು ಕಳೆದ ವಾರ ಸರಳವಾಗಿ ಸೆಲೆಬ್ರೇಟ್ ಮಾಡಿದ್ದೇವೆ. ತಂದೆಯವರು ಅವರ ಐ ಪ್ಯಾಡ್‍ನಲ್ಲಿಯೇ ಕ್ರಿಕೆಟ್ ಹಾಗೂ ಟೆನ್ನಿಸ್ ವೀಕ್ಷಿಸುತ್ತಿದ್ದಾರೆ. ಐಪಿಎಲ್ ಆರಂಭವಾಗುವುದನ್ನು ಕಾಯುತ್ತಿದ್ದಾರೆ. ಅಲ್ಲದೆ ಬರವಣಿಗೆ ಹಾಗೂ ಮಾತನಾಡುವುದನ್ನು ಮಾಡುತ್ತಿದ್ದಾರೆ. ಫಿಸಿಯೋಥೆರಪಿಯನ್ನು ಸಹ ಮಾಡಲಾಗುತ್ತಿದೆ. ನಿಮ್ಮೆಲ್ಲರ, ಪ್ರೀತಿ, ಕಾಳಜಿ, ಪ್ರಾರ್ಥನೆಗೆ ಧನ್ಯವಾದಗಳು ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ನೆಗೆಟಿವ್ ಬಂದಿದೆ ಎಂಬುದು ಖುಷಿಯ ವಿಚಾರವಾದರೂ, ಅವರ ಶ್ವಾಸ ಮೊದಲಿನಂತಾಗಬೇಕು. ಅವರೇ ಉಸಿರಾಡುವಂತಾಗಬೇಕು. ಸದ್ಯಕ್ಕೆ ನಮಗೆಲ್ಲ ಅದೇ ಮಹತ್ವದ್ದು. ಇನ್ನೊಂದು ವಾರದಲ್ಲಿ ಅಪ್ಪನ ವಿವಾಹ ವಾರ್ಷಿಕೋತ್ಸವ ಇರುವ ಹಿನ್ನೆಲೆಯಲ್ಲಿ ಆ ಖುಷಿಯ ಕ್ಷಣಗಳನ್ನೂ ಸಂಭ್ರಮಿಸಲಿದ್ದೇವೆ. ಎಂದಿನಂತೆ ಫಿಸಿಯೋಥೆರಪಿ ನಡೆಯುತ್ತಿದೆ. ನಿಮ್ಮಗಳ ಪ್ರಾರ್ಥನೆ ಹೀಗೆ ಮುಂದುವರಿಯಲಿ ಎಂದು ಕಿರು ವಿಡಿಯೋ ಮೂಲಕ ಅಪ್ಪನ ಆರೋಗ್ಯದ ಬಗ್ಗೆ ಅಪ್‍ಡೇಟ್ ಕೊಟ್ಟಿದ್ದಾರೆ ಎಸ್ಪಿ ಚರಣ್