KARNATAKA
ಸೌಜನ್ಯ ಪ್ರಕರಣ : ಧರ್ಮವನ್ನು ಮಂಜುನಾಥ ಕಾಯ್ತಾನೆ,ಸತ್ಯವನ್ನು ಅಣ್ಣಪ್ಪ ಸ್ವಾಮೀ ಹೊರಗೆಳೆಯ್ತಾನೆ- ತಿಮರೋಡಿ
ಸೌಜನ್ಯ ಅತ್ಯಾಚಾರಿಗಳಿಗೆ ಶಿಕ್ಷೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಕೋಟ ಅಮೃತೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸೌಜನ್ಯ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷಗಾಗಿ ಅವರು ಶ್ರೀ ದೇವಿಯಲ್ಲಿ ಪ್ರಾರ್ಥಿಸಿದರು.
ಉಡುಪಿ : ಸೌಜನ್ಯ ಅತ್ಯಾಚಾರಿಗಳಿಗೆ ಶಿಕ್ಷೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಕೋಟ ಅಮೃತೇಶ್ವರೀ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸೌಜನ್ಯ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷಗಾಗಿ ಅವರು ಶ್ರೀ ದೇವಿಯಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಿಮರೋಡಿ, ನಿರಂತರ ಹೋರಾಟಗಳ ಮೂಲಕ ಸಮಾಜಕ್ಕೆ ಸತ್ಯವನ್ನು ತೊರಿಸುವ ಕೆಲಸ ಮಾಡುತ್ತಿದ್ದೇವೆ.
11 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ, ರಾಜ್ಯಾದ್ಯಂತ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುತ್ತಿದ್ದೇವೆ, ಅದೆಷ್ಟೊ ಘಟನೆಗಳು ಧರ್ಮಸ್ಥಳದಲ್ಲಿ ನಡೆದಿವೆ.
ಹಾಗಾದರೆ ಆ ಘಟನೆಗಳ ವಿರುದ್ಧ ಹೋರಾಟ ನಡೆಸುವುದೇ ತಪ್ಪಾ ನ್ಯಾಯ ಕೇಳುವುದು ತಪ್ಪಾದರೆ ಈ ದೇಶದ ಕಾನೂನನ್ನು ಏಕೆ ಗಟ್ಟಿಗೊಳಿಸಿದ್ದಾರೆ?
ಧರ್ಮದ ತಳಹದಿ ಇರುವ ಕ್ಷೇತ್ರದಲ್ಲಿ ಧರ್ಮವಿರೋಧಿ ಕೃತ್ಯಗಳನ್ನು ಕೆಲವರು ಮಾಡುತ್ತಿದ್ದಾರೆ. ಇದಕ್ಕೆಲ್ಲ ಪೂರ್ಣ ವಿರಾಮ ಆಗಬೇಕಿದೆ.ಧರ್ಮವನ್ನು ಮಂಜುನಾಥ ಕಾಯುತ್ತಾನೆ, ಸತ್ಯವನ್ನು ಅಣ್ಣಪ್ಪ ಸ್ವಾಮೀ ಹೊರಗೆಳೆಯುತ್ತಾನೆ.
ಇದರ ನಂಬಿಕೆ ಮೇಲೆ ಹೋರಾಟದ ಕಾವು ಏರುತ್ತಿದೆ. ಅತ್ಯಾಚಾರಿಗಳ ರಕ್ಷಣೆ ಎಷ್ಟು ಸಮಂಜಸ?
ಇದರ ಹಿಂದೆ ಕಾಣದ ಕೈಗಳು ಯಾರವು? ಇದು ಈ ಹೊರಜಗತ್ತಿಗೆ ತಿಳಿಯಬೇಕಾಗಿದೆ. ಶತಮಾನಗಳಿಂದ ಭಕ್ತಿಯನ್ನು ಇಟ್ಟು ಬರುವ ಜನರ ಭಾವನೆಗಳ ಮೇಲೆ ಅತ್ಯಾಚಾರ ಇಂದಿಗೂ ನಡೆಯುತ್ತಿದೆ.
ನಮ್ಮ ಹೋರಾಟ ಯಾವ ಧರ್ಮಾಧಿಕಾರಿಯ ವಿರುದ್ಧ ಅಲ್ಲ. ನೈಜ ಅತ್ಯಾಚಾರಿಗಳ ವಿರುದ್ಧವೇ ಹೊರತು ಯಾವ ಕ್ಷೇತ್ರದ ಮೇಲಲ್ಲ. ಅಲ್ಲಿನ ನ್ಯಾಯ ದೇವರ ಮುಖಕ್ಕೆ ಅಂಟಿದ ಕಳಂಕವನ್ನು ತೊಡೆದುಹಾಕಿ ಪಾವಿತ್ರತ್ಯೆಯನ್ನು ಉಳಿಸುವ ನಿಟ್ಟಿನಲ್ಲಿ ನಾವುಗಳು ಅಣಿಯಾಗಿದ್ದೇವೆ.
ಆರೋಪಿಗಳನ್ನು ರಕ್ಷಣೆ ಮಾಡಿದಂತವರಿಗೂ ಕಠಿಣ ಶಿಕ್ಷೆಯಾಗಬೇಕು. ಸರಕಾರದ ಮೇಲೆ ಭರವಸೆ ಇರಿಸಿದ್ದೇವೆ. ಒಬ್ಬಿಬ್ಬರು ಬಕೆಟ್ ಹಿಡಿಯುವ ಜೊತೆಗೆ ದೊಡ್ಡವರ ಚೇಲವಾಗಿ ಕಾರ್ಯನಿರ್ವಹಿಸುವುದು ಮೊದಲು ಬಿಡಬೇಕು.
ಅಂತಹ ರಾಜಕಾರಣ ಅಂತ್ಯಗೊಳಿಸಬೇಕು. ಇಲ್ಲಿಯವರೆಗೂ ಇದೇ ಆಗಿದ್ದು ಇನ್ನು ಮುಂದೆ ಈ ರೀತಿಯಾಗಬಾರದು. ಸತ್ಯ ಯಾವತ್ತೂ ಕಹಿಯಾಗಿ ಇರುತ್ತದೆ. ನಾವು 11 ವರ್ಷದಿಂದ ಆಡಳಿತದಲ್ಲಿರುವರಿಗೆ ನ್ಯಾಯ ದೊರಕಿಸಲು ಕೇಳುತ್ತಿದ್ದೇವೆ.
ಆದರೆ ಅದು ಆಗಿಲ್ಲ. ದೇಶದ ಉನ್ನತ ತನಿಖಾ ಸಂಸ್ಥೆ ಸಂತೋಷ್ ರಾವ್ ನಿರ್ದೋಷಿ ಎಂದು ಪ್ರಕಟಿಸಿದೆ. ಪ್ರಸ್ತುತ ಸಂತೋಷ್ ರಾವ್ ಆರೋಪಿ ಅನ್ನುವವರು ಆರೋಪಿಗಳ ಸಾಲಿನಲ್ಲಿ ಇದ್ದಾರೆ. ಹಾಗಾದರೆ ಅತ್ಯಾಚಾರಿಗಳು ಯಾರು? ಅದರ ಸತ್ಯಾಸ್ಯತೆಗಳು ಹೊರಬರಬೇಕು.
ನಮ್ಮ ಹೋರಾಟ ವೈಯುಕ್ತಿಕ ಇಲ್ಲ. ಸತ್ಯ ಹೊರ ಬಂದೇ ಬರುತ್ತದೆ. ಧರ್ಮಸ್ಥಾಪನೆಗೆ ಸಮಯ ನಿಗದಿಯಾಗಿದೆ ಎಂದು ತಿಮರೋಡಿ ಹೇಳಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ, ಮಾನವ ಹಕ್ಕುಗಳ ಆಯೋಗದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ದಿನೇಶ್ ಗಾಣಿಗ, ಮಾನವ ಹಕ್ಕುಗಳ ಆಯೋಗದ ಜೊತೆ ಕಾರ್ಯದರ್ಶಿ ನಾಗರಾಜ್ ಗಾಣಿಗ, ಹಿಂದು ಸಂಘಟನೆಯ ಯುವ ಮುಖಂಡ ಕೀರ್ತಿರಾಜ್,ಭರತ್ ಗಾಣಿಗ ಮೊದಲದವರು ಉಪಸ್ಥಿತರಿದ್ದರು.