LATEST NEWS
ದಕ್ಷಿಣ ಕೋರಿಯಾದಲ್ಲಿ ಮಿಲಿಟರಿ ಆಡಳಿತ ಹೇರಿದ ಅಧ್ಯಕ್ಷ ಯೂನ್ ಸುಕ್ ಯೆಲ್
ಸಿಯೋಲ್ ಡಿಸೆಂಬರ್ 03: ಯಾರೂ ಉಹಿಸದ ರೀತಿಯಲ್ಲಿ ದಕ್ಷಿಣ ಕೊರಿಯಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿ ಮಿಲಿಟರಿ ಆಡಳಿತವನ್ನು ಹೇರಲಾಗಿದೆ.
ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೆಲ್ ಅವರು ಮಂಗಳವಾರ ರಾತ್ರಿ ದೂರದರ್ಶನ ಭಾಷಣದಲ್ಲಿ ತುರ್ತು ಮಿಲಿಟರಿ ಆಡಳಿತವನ್ನು ಘೋಷಣೆ ಮಾಡಿದ್ದಾರೆ. ಉತ್ತರ ಕೊರಿಯಾದ ಕಮ್ಯುನಿಸ್ಟ್ ಪಡೆಗಳ ಬೆದರಿಕೆಗಳಿಂದ ದಕ್ಷಿಣ ಕೊರಿಯಾವನ್ನು ರಕ್ಷಿಸಲು ಮತ್ತು ಜನರ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಲೂಟಿ ಮಾಡುವ ರಾಜ್ಯ ವಿರೋಧಿ ಅಂಶಗಳನ್ನು ನಿರ್ಮೂಲನೆ ಮಾಡಲು ತುರ್ತು ಸಮರ ಕಾನೂನನ್ನು ಘೋಷಿಸುತ್ತೇನೆ ಎಂದು ಯೂನ್ ಸುಕ್ ಯೆಲ್ ತಮ್ಮ ಭಾಷಣದಲ್ಲಿ ತಿಳಿಸಿದರು.
ದಕ್ಷಿಣ ಕೊರಿಯಾದಲ್ಲಿ 1980 ರ ನಂತರ ಮೊದಲ ಬಾರಿಗೆ ಮಿಲಿಟರಿ ಆಡಳಿತ ಜಾರಿಗೆ ಬಂದಿದೆ. ಮಿಲಿಟರಿ ಆಡಳಿತದ ಸಮಯದಲ್ಲಿ ಸಂಸತ್ತು ಮತ್ತು ರಾಜಕೀಯ ಪಕ್ಷಗಳ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಮಾಧ್ಯಮಗಳು ಮಿಲಿಟರಿ ನಿಯಂತ್ರಣದಲ್ಲಿರುತ್ತಾರೆ ಎಂದು ವರದಿಯಾಗಿದೆ. ಈಗಾಗಲೇ ಮಿಲಿಟರಿ ಆಡಳಿತದ ವಿರುದ್ದ ಜನರು ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದ್ದಾರೆ. ಪ್ರಪಂಚದ ಪ್ರಮುಖ ವಾಣಿಜ್ಯ ದೇಶವಾಗಿರುವ ದಕ್ಷಿಣಕೊರಿಯಾದಲ್ಲಿ ಮಿಲಿಟರಿ ಆಡಳಿತ ಹೇರಿಕೆಯಾಗಿರುವುದು ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತದಲ್ಲೂ ಷೇರು ಮಾರುಕಟ್ಟೆ ಮೇಲೆ ಪರಿಣಾಮದ ಭಿರುವ ಸಾಧ್ಯೆತ ಇದೆ ಎಂದು ಹೇಳಲಾಗಿದೆ.