LATEST NEWS
ಇಂದು ಮಿರರ್ ಇಮೇಜ್ ನಲ್ಲಿ ತುಳುನಾಡಿನ ಮೊದಲ ಸಂಗೀತ ನಿರ್ದೇಶಕ ಚರಣ್ ಕುಮಾರ್ ಸಂಗೀತ ಬದುಕಿನ ಅನಾವರಣ……….

ಇಂದು ಮಿರರ್ ಇಮೇಜ್ ನಲ್ಲಿ ತುಳುನಾಡಿನ ಮೊದಲ ಸಂಗೀತ ನಿರ್ದೇಶಕ ಚರಣ್ ಕುಮಾರ್ ಸಂಗೀತ ಬದುಕಿನ ಅನಾವರಣ……….
ಮಂಗಳೂರು, ಸೆಪ್ಟಂಬರ್ 26: ತುಳುನಾಡಿನ ಮೊದಲ ಸಂಗೀತ ನಿರ್ದೇಶಕರೆಂದೇ ಗುರುತಿಸಿರುವ ಅಶೋಕ್ ಚರಣ್ ಮ್ಯೂಸಿಕ್ ನ ಚರಣ್ ಕುಮಾರ್ ಅವರ ಸಂಗೀತ ಬದುಕಿನ ಕುರಿತ ವಿಶೇಷ ಕಾರ್ಯಕ್ರಮ ಮ್ಯಾಂಗಲೂರು ಮಿರರ್ ಯೂಟ್ಯೂಬ್ ಚಾನಲ್ ನ ಮಿರರ್ ಇಮೇಜ್ ನಲ್ಲಿ ಭಿತ್ತರವಾಗಲಿದೆ.
ಇಂದು ಸಂಜೆ 7 ಗಂಟೆಗೆ ಈ ವಿಶೇಷ ಕಾರ್ಯಕ್ರಮ ಪ್ರಸಾರವಾಗಲಿದ್ದು, ತುಳು ರಂಗಭೂಮಿ, ಚಿತ್ರರಂಗಕ್ಕೆ ಚರಣ್ ಕುಮಾರ್ ಕೊಡುಗೆಯ ಅನಾವರಣ ಈ ಕಾರ್ಯಕ್ರಮದ ಮೂಲಕ ಆಗಲಿದೆ.

ಖ್ಯಾತ ಸಂಗೀತ ನಿರ್ದೇಶಕರಾದ ಇಳಯರಾಜ, ಹಂಸಲೇಖ ಮೊದಲಾದ ದಿಗ್ಗಜರ ಮಾರ್ಗದರ್ಶನ ಹಾಗೂ ಪ್ರೋತ್ಸಾಹದಲ್ಲಿ ಬೆಳೆದ ಚರಣ್ ಕುಮಾರ್ ಎನ್ನುವ ಕಲಾ ಮಾಂತ್ರಿಕನ ಒಳ, ಹೊರಗಿನ ಮಜಲುಗಳು ಈ ಕಾರ್ಯಕ್ರಮದ ಮೂಲಕ ಸಂಗೀತ ಲೋಕಕ್ಕೆ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ.
ಪ್ರಶಸ್ತಿ, ಪ್ರಚಾರಗಳಿಂದ ದೂರವೇ ಉಳಿದಿರುವ ಚರಣ್ ಕುಮಾರ್ ಗರಡಿಯಲ್ಲಿ ಪಳಗಿದವರೆಷ್ಟು ಎನ್ನುವ ಇಂಟ್ರೆಸ್ಟ್ರಿಂಗ್ ಮಾಹಿತಿಯೂ ಈ ಕಾರ್ಯಕ್ರಮದ ಮೂಲಕ ತೆರೆದುಕೊಳ್ಳಲಿದೆ