LATEST NEWS
ಪಂಪ್ ವೆಲ್ ಮಸೀದಿಗೆ ಸೋಡಾ ಬಾಟಲ್ ಎಸೆದ ದುಷ್ಕರ್ಮಿಗಳು
ಮಂಗಳೂರು ಅಗಸ್ಟ್ 22: ಅಲ್ಪಸಂಖ್ಯಾತರ ಭವನಕ್ಕೆ ಕಲ್ಲು ತೂರಾಟದ ಘಟನೆ ಮಾಸುವ ಮುನ್ನವೇ ಮಂಗಳೂರಿನಲ್ಲಿ ಪಂಪ್ವೆಲ್ ಮಸೀದಿಗೆ ದುಷ್ಕರ್ಮಿಗಳು ಸೋಡಾ ಬಾಟಲ್ ಎಸೆದಿರುವ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ.
ಇಂದು ಬೆಳಿಗ್ಗೆ ನಗರದ ಪಂಪ್ವೆಲ್ನಲ್ಲಿರುವ ಮಸ್ಜಿದುತ್ತಖ್ವಾ ಮಸೀದಿ ಮೇಲೆ ಬಾಟಲ್ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಸೀದಿಯ ಕಾವಲುಗಾರನ ಕಣ್ಣ ತಪ್ಪಿಸಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಉಪ ವಿಭಾಗ ಎಸಿಪಿ ಕೋದಂಡರಾಮ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
You must be logged in to post a comment Login