Connect with us

    LATEST NEWS

    ಸಾಮಾಜಿಕ ಜಾಲತಾಣದಲ್ಲಿ ಪರಿಚಯ 13 ವರ್ಷದ ಬಾಲಕಿಯನ್ನು ಮುಂಬೈಗೆ ಕರೆಸಿ ಸಾಮೂಹಿಕ ಅತ್ಯಾಚಾರ

    ಜೈಪುರ: ಸಾಮಾಜಿಕ ಜಾಲತಾಣದಲ್ಲಿ ಅಪರಿಚಿತರ ಸ್ನೇಹ ಮಾಡುವ ಅವಾಂತರಕ್ಕೆ ಜೈಪುರದ 13 ವರ್ಷದ ಬಾಲಕಿ ಮೇಲಾದ ಈ ಭೀಕರ ಘಟನೆ ಒಂದು ನಿದರ್ಶನವಾಗಿದೆ. ಸಾಮಾಜಿಕ ಜಾಲತಾಣದಲ್ಲಿ 13 ವರ್ಷದ ಬಾಲಕಿಯನ್ನು ಪರಿಚಯ ಮಾಡಿಕೊಂಡು ದುಷ್ಕರ್ಮಿಯೊಬ್ಬ ಅವಳ ಭೇಟಿಯಾಗುವ ನೆಪದಲ್ಲಿ ಮುಂಬೈಗೆ ಕರೆಸಿ ಸಾಮೂಹಿಕ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ನಡೆದಿದೆ.


    ಆರೋಪಿ ಸೈಫ್ ಅಲಿ ಖಾನ್(21) ಹಾಗೂ ಮತ್ತೊಬ್ಬ ಅಪ್ರಾಪ್ತ ಬಾಲಕನಾಗಿದ್ದಾನೆ. ಜೈಪುರದ ಬಾಲಕಿ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟಿವ್ ಆಗಿದ್ದು, ಈ ವೇಳೆ 21 ವರ್ಷದ ಯುವಕನೊಂದಿಗೆ ಸ್ನೇಹ ಬೆಳೆಸಿದ್ದಾಳೆ. ಬಳಿಕ ಆರೋಪಿ ಹಾಗೂ ಅಪ್ರಾಪ್ತನ ಜೊತೆ ಮಾತನಾಡಲು ಆರಂಭಿಸಿದ್ದಾಳೆ. ಇಬ್ಬರೂ ಆಕೆಯನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಜೈಪುರದ ಬಸ್ ನಿಲ್ದಾಣಕ್ಕೆ ಬರಲು ಸೂಚಿಸಿದ್ದಾರೆ. ಬಳಿಕ ಸೂರತ್ ಬಸ್ ಹತ್ತಲು ಸೂಚಿಸಿದ್ದು, 13 ವರ್ಷದ ಬಾಲಕಿ ಮನೆಯಿಂದ ಹೊರಟು ಸೂರತ್ ಬಸ್ ಹತ್ತಿದ್ದಾಳೆ.

    ಆಕೆಯ ಬಳಿ ಹಣವಿರಲಿಲ್ಲ ಆರೋಪಿಯೇ ಯುಪಿಐ ಮೂಲಕ ನೇರವಾಗಿ ಬಸ್ ಕಂಡಕ್ಟರ್‍ಗೆ ಹಣ ಸಂದಾಯ ಮಾಡಿದ್ದಾನೆ. ಬಳಿಕ ಬಾಲಕಿ ಸೂರತ್‍ಗೆ ಬಂದು ಇಳಿದಿದ್ದಾಳೆ. ನಂತರ ಇಬ್ಬರೂ ಸೇರಿ ಆಕೆಯನ್ನು ಮುಂಬೈಗೆ ಕರೆದೊಯ್ದಿದ್ದಾರೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮಗಳು ಕಾಣದ್ದರಿಂದ ಆತಂಕಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಆಕೆಯ ಮೊಬೈಲ್ ಲೊಕೇಶನ್ ಆಧರಿಸಿ ಪೊಲೀಸರು ಬಾಲಕಿಯನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಬಾಲಕಿಯನ್ನು ಕುರ್ಲಾದಲ್ಲಿ ರಕ್ಷಣೆ ಮಾಡಲಾಗಿದೆ. ನಂತರ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply