DAKSHINA KANNADA
ಪುತ್ತೂರು – ಆಕಸ್ಮಿಕ ಬೆಂಕಿಗೆ ಸಂಪೂರ್ಣ ಸುಟ್ಟು ಹೋದ ಮನೆ
ಪುತ್ತೂರು ಜನವರಿ 30: ಆಕಸ್ಮಿಕ ಬೆಂಕಿಗೆ ಮನೆಯೊಂದು ಸಂಪೂರ್ಣ ಸುಟ್ಟು ಬಸ್ಮವಾದ ಘಟನೆ ಪುತ್ತೂರಿನ ಚಿಕ್ಕಪುತ್ತೂರು ಎಂಬಲ್ಲಿ ನಡೆದಿದೆ.
ವಹಿಜುದ್ದೀನ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಪ್ಲಾಸ್ಟಿಕ್ ಸಾಮಾಗ್ರಿಗಳ ಮಾರಾಟಗಾರರಿಗೆ ಮನೆ ಬಾಡಿಗೆ ನೀಡಲಾಗಿತ್ತು. ಮನೆಯಲ್ಲಿದ್ದ ಮಕ್ಕಳು ಪಟಾಕಿ ಹೊಡೆಯುತ್ತಿದ್ದ ಸಂದರ್ಭದಲ್ಲಿ ಪ್ಲಾಸ್ಟಿಕ್ ಸಾಮಾಗ್ರಿಗಳಿಗೆ ಬೆಂಕಿ ತಗುಲಿ ಇಡೀ ಮನೆ ಸಂಪೂರ್ಣ ಸುಟ್ಟು ಹೋಗಿದೆ. ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದೆ.
You must be logged in to post a comment Login