FILM
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಯೂಟ್ಯೂಬರ್ ಗೆ 20 ವರ್ಷ ಜೈಲು
ವಿಶಾಖ ಪಟ್ಟಣಂ ಜನವರಿ 11: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ತೆಲುಗು ಯೂ ಟ್ಯೂಬರ್ ಫನ್ ಬಕೆಟ್ ಭಾರ್ಗವ್ ಎಂದು ಖ್ಯಾತಿಯ ಚಿಪ್ಪದ ಭಾರ್ಗವ್ ಗೆ ವಿಶಾಖಪಟ್ಟಣಂನ ಪೋಕ್ಸೋ ವಿಶೇಷ ನ್ಯಾಯಾಲಯವೊಂದು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಆರೋಪಿ 14 ವರ್ಷ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದ, ಸಂತ್ರಸ್ತೆ ನಾಲ್ಕು ತಿಂಗಳ ಗರ್ಭಿಣಿ ಎಂದು ಗೊತ್ತಾದ ಬಳಿಕ ಆಕೆಯ ಕುಟುಂಬಸ್ಥರು ಹೈದರಾಬಾದಿನ ಪೆಂದುರ್ತಿ ಠಾಣೆಯಲ್ಲಿ ಏಪ್ರಿಲ್ 16, 2021 ರಂದು ದೂರು ದಾಖಲಿಸಿದ್ದರು. ಬಳಿಕ ಹೈದರಾಬಾದಿನಲ್ಲಿ ಆರೋಪಿಯನ್ನು ಬಂಧಿಸಿ, ವಿಶಾಖಪಟ್ಟಣಂಗೆ ಕರೆ ತರಲಾಗಿತ್ತು. ಆತನ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಐಪಿಸಿಯ ಇತರ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿತ್ತು.
ವಿಶೇಷ ನ್ಯಾಯಾಲಯದಲ್ಲಿ ಜಾರ್ಜ್ ಶೀಟ್ ದಾಖಲಿಸಿದ ಪೊಲೀಸರು ಎಲ್ಲಾ ದಾಖಲೆಗಳನ್ನು ಸಲ್ಲಿಸಿದರು. ಅವರನ್ನು ದೋಷಿ ಎಂದು ಪರಿಗಣಿಸಿದ ನ್ಯಾಯಾಲಯ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಅಲ್ಲದೇ ಸಂತ್ರಸ್ತೆಗೆ ರೂ. 4 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತು.