DAKSHINA KANNADA
ಕಾರಂತ ಪ್ರಶಸ್ತಿಗೆ ನಾಲಾಯಕ್,ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರೈ ವಿರುದ್ಧ ಕಿರಿಕ್
ಕಾರಂತ ಪ್ರಶಸ್ತಿಗೆ ನಾಲಾಯಕ್,ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಾಶ್ ರೈವಿರುದ್ಧ ಕಿರಿಕ್
ಮಂಗಳೂರು:ಅಕ್ಟೋಬರ್ 5: ಈ ಬಾರಿಯ ಶಿವರಾಮ ಕಾರಂತ ಪ್ರಶಸ್ತಿಯನ್ನು ನೀಡಲು ಖ್ಯಾತ ಬಹುಭಾಷ ಚಿತ್ರನಟ ಪ್ರಕಾಶ್ ರೈ ಯವರನ್ನು ಆಯ್ಕೆ ಮಾಡಿತ್ತು. ಇದೀಗ ಇವರ ಆಯ್ಕೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ವಿರೋಧ ವ್ಯಕ್ತಡಿಸಲಾಗಿದೆ. ಡಾ.ಶಿವರಾಮ ಕಾರಂತ ಟ್ರಸ್ಟ್, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಹಾಗೂ ಕೋಟತಟ್ಟು ಗ್ರಾಮ ಪಂಚಾಯತ್ ಶಿವರಾಂ ಕಾರಂತ ಪ್ರಶಸ್ತಿಗೆ ನಟ ಪ್ರಕಾಶ್ ರೈ ಅವರಿಗೆ ಆಯ್ಕೆ ಮಾಡಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.
ಪ್ರಕಾಶ್ ರೈ ಓರ್ವ ಉತ್ತಮ ಆಯ್ಕೆಯಲ್ಲ
ಡಾ.ಶಿವರಾಮ ಕಾರಂತರು ನಮ್ಮೂರಿನ ಹೆಮ್ಮೆ ಅವರು ಸದಾ ಪರಿಸರ,ಸಮಾಜದ ಬಗ್ಗೆ ಧ್ವನಿ ಎತ್ತುತ್ತಿದ್ದರು. ಅಂತವರ ಹೆಸರಿನಲ್ಲಿ ಕೊಡುವ ಪ್ರಶಸ್ತಿಗೆ ಪ್ರಕಾಶ್ ರೈ ಓರ್ವ ಉತ್ತಮ ಆಯ್ಕೆಯಲ್ಲ.
ಪ್ರಕಾಶ್ ರೈ ನಾಡಿನ ಜೀವಂತ ಸಮಸ್ಯೆಗಳಾದ ಕಾವೇರಿ, ಕಸ್ತೂರಿ ರಂಗನ್ ವರದಿ ಜಾರಿ ವಿಚಾರ, ನೇತ್ರಾವತಿ ವಿಚಾರದಲ್ಲಿ ಮಾತನಾಡಿದವರಲ್ಲ.ಹಾಗಿದ್ದ ಮೇಲೂ ಅವರನ್ನು ಪ್ರಶಸ್ತಿಗೆ ಯಾಕೆ ಆಯ್ಕೆ ಮಾಡಲಾಯಿತು ಎಂದು ಅವರು ನೆಟ್ಟಿಗರು ಪ್ರಶ್ನಿಸಿದ್ದಾರೆ.ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿರುದ್ಧ ಹೇಳಿಕೆ ನೀಡುವ ಮೂಲಕ ಪ್ರಕಾಶ್ ರೈ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದ್ದರಿಂದ ವಿವಾದಾತ್ಮಕ ಹೇಳಿಕೆ ನೀಡುವವರಿಗೆ ಈ ಪ್ರಶಸ್ತಿ ಕೂಡಬಾರದೆಂದು ಜೈ ಭಾರ್ಗವ ಬಳಗ ಎನ್ನುವ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಒಂದು ವೇಳೆ ಪ್ರಕಾಶ ರೈ ಅವರಿಗೆ ಪ್ರಶಸ್ತಿ ನೀಡಿದ್ದಲ್ಲಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದೆಂದು ಎಂದು ಸಂಘಟನೆ ಎಚ್ಚರಿಸಿದೆ. ಈಗಾಗಲೇ ಪ್ರತಿಷ್ಟಾನದ ವತಿಯಿಂದ ಕಾರಂತರ ಜನ್ಮದಿನೋತ್ಸವ ಹಾಗೂ 13 ನೇ ವರುಷದ ಕಾರಂತ ಪ್ರಶಸ್ತಿ ವಿತರಣಾ ಸಮಾರಂಭದ ಉದ್ಘಾಟನೆಗೊಂಡಿದ್ದು ಒಟ್ಟು ಹತ್ತು ದಿನಗಳ ಕಾಲ ಕುಂದಾಪುರದ ಕೋಟದಲ್ಲಿರುವ ಕಾರಂತ ಥೀಂ ಪಾರ್ಕ್ ನಲ್ಲಿ ಪ್ರತಿದಿನ ಕಾರ್ಯಕ್ರಮ ನಡೆಯುತ್ತಿದೆ.
ಕಾರ್ಯಕ್ರಮದ ಕೊನೆ ದಿನ ಅಂದರೆ 10 ನೇ ತಾರೀಕಿನಂದು ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಕಾಶ್ ರೈ ಆಯ್ಕೆ ಈ ಹಿಂದೆಯೇ ಆಗಿದ್ದರಿಂದ ಸಂಘಟಕರು ಈಗ ಗೊಂದಲಗೀಡಾಗಿದ್ದಾರೆ.
ಅಲ್ಲದೇ ಸಂಘಟಕರ ನಡುವೆಯೂ ಪ್ರಕಾಶ್ ರೈ ಯವರಿಗೆ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ನೀಡಲು ವಿರೋಧವಿದೆ ಅನ್ನೋ ಮಾತು ಕೇಳಿ ಬಂದಿದೆ. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಈ ಪ್ರಶಸ್ತಿಯನ್ನು ಹುಟ್ಟು ಹಾಕಿದವರಾಗಿದ್ದು, ಇದೀಗ ಶ್ರೀನಿವಾಸ್ ಪೂಜಾರಿ ಮೇಲೆಯೇ ಒತ್ತಡಗಳು ಹೆಚ್ಚಾಗುತ್ತಿದೆ.