Connect with us

    LATEST NEWS

    ಪುತ್ತೂರಿನಲ್ಲಿ ಸಾಮಾಜಿಕ ಅಂತರ ಕಾಯ್ದಕೊಂಡ ಸಾರ್ವಜನಿಕರು

    ಪುತ್ತೂರಿನಲ್ಲಿ ಸಾಮಾಜಿಕ ಅಂತರ ಕಾಯ್ದಕೊಂಡ ಸಾರ್ವಜನಿಕರು

    ಪುತ್ತೂರು ಮಾರ್ಚ್ 26: ಕೊರೊನಾ ಹಿನ್ನಲೆಯಲ್ಲಿ ನಿನ್ನೆಯಿಂದ ಇಡೀ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಈ ಮಹಾಮಾರಿಯನ್ನು ತಡೆಗಟ್ಟಲು ಇರುವ ಒಂದೇ ಅವಕಾಶ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಎನ್ನುವ ಸೂಚನೆಯನ್ನೂ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಹೇಳಿದ್ದರು.

    ಇದೀಗ ಈ ಸೂಚನೆಯನ್ನು ಸಾರ್ವಜನಿಕರು ಪಾಲಿಸಲು ಆರಂಭಿಸಿದ್ದು, ಪುತ್ತೂರಿನ ಹಲವು ಕಡೆಗಳಲ್ಲಿ ಈ ಸಾಮಾಜಿಕ ಅಂತರ ಕಾಯ್ದುಕೊಂಡ ದೃಶ್ಯಗಳು ಇಂದು ಕಂಡು ಬಂದಿದೆ. ಅವಶ್ಯಕ ವಸ್ತುಗಳಿಗಾಗಿ ಜನ ಅಂಗಡಿಗಳ ಮುಂದೆ ಮುಗಿಬೀಳದೆ ಪರಸ್ಪರ ಒಂದು ಮೀಟರ್ ಅಂತರದಲ್ಲಿ ಸಾಲಾಗಿ ನಿಲ್ಲುವ ಮೂಲಕ ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಿದ್ದಾರೆ.

    ಇಂದು ಸಹ ಅಗತ್ಯ ವಸ್ತುಗಳ ಅಂಗಡಿಗಳಾದ ದಿನಸಿ, ತರಕಾರಿ,ಹಣ್ಣು-ಹಂಪಲು,ಮಾಂಸ,ಕೋಳಿ ಅಂಗಡಿಗಳ ಮುಂದೆ ಜನರ ಸಾಲು ಕಂಡು ಬಂದಿದೆ. ಪೋಲೀಸರು ಸಾರ್ವಜನಿಕರನ್ನು ನಿಯಂತ್ರಿಸುವ ಕಾರ್ಯದಲ್ಲೂ ನಿರತರಾಗಿದ್ದು, ಅನಗತ್ಯವಾಗಿ ತಿರುಗುವವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮದ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply