LATEST NEWS
ಲಾಕ್ ಡೌನ್ ವೇಳೆ ಊಟೋಪಚಾರದ ನೀಡಿ ಮಾನವೀಯತೆ ಮೆರೆದ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ

ಉಡುಪಿ, ಎಪ್ರಿಲ್ 28: ಕಳೆದ ಬಾರಿ ಲಾಕ್ ಡೌನ್ ವೇಳೆ ಅನೇಕ ಸಾಮಾಜಿಕ ಸಂಘಟನೆಗಳು, ರಾಜಕೀಯ ನಾಯಕರು ಆಹಾರ ವಿತರಿಸುವ ಮೂಲಕ ನಿರ್ಗತಿಕ ಜನರಿಗೆ ಊಟೋಪಚಾರದ ವ್ಯವಸ್ಥೆ ಮಾಡಿದ್ದರು.
ಆದರೆ ಈ ಬಾರಿ ವೀಕೆಂಡ್ ಕರ್ಫ್ಯೂ ವೇಳೆ ಆಹಾರವಿಲ್ಲದೆ ಬಳಲುವ ಅನೇಕ ನಿರ್ಗತಿಕ ಜನರು ನಗರದ ಬಸ್ ನಿಲ್ದಾಣ ಪರಿಸರದಲ್ಲಿ ಕುಳಿತಿದ್ದರು. ಪರಿಸ್ಥಿತಿಯನ್ನು ಮನಗಂಡ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅವರು ಅನೇಕರಿಗೆ ತನ್ನ ಸಂತ ಖರ್ಚಿನಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಿದ್ದಾರೆ.

ತೀರಾ ಅಸಹಾಯಕರಿಗೆ, ಅನಾರೋಗ್ಯ ಪೀಡಿತರಿಗೆ, ವೃದ್ದರು ಅಂಗವಿಕಲರು, ಮಾನಸಿಕ ಅಸ್ವಸ್ಥರಿಗೆ, ಊಟ ಸಿಗದ ಅಸಹಾಯಕರಿಗೆ ಊಟವನ್ನು ವಿತರಿಸಿ ಹಸಿದವರ ಹಸಿವು ನಿಗಿಸಿದ್ದಾರೆ.ಆದಿಉಡುಪಿ, ಪಂದುಬೆಟ್ಟು, ಕರಾವಳಿ ಬೈಪಾಸ್, ಶಿರಿಬೀಡು, ರಥಬೀದಿ, ಬಲಾಯಿಪಾದೆ, ರೈಲ್ವೆ ನಿಲ್ದಾಣ, ನಗರದ ಮುಖ್ಯ ನಾಲ್ಕು ಬಸ್ಸು ನಿಲ್ದಾಣದಲ್ಲಿ ಆಹಾರದ ವಿತರಣೆ ನಡೆಯಿತು.
ಪಾರ್ಸೆಲು ಊಟ ಪಡೆಯಲು ಹೋಟೆಲಿನಲ್ಲಿ ಅವಕಾಶವಿದ್ದರೂ ಬಹುತೇಕ ಹೋಟೆಲುಗಳು ಮುಚ್ಚಿರುವುದರಿಂದ ನಗರ ಪ್ರದೇಶದಲ್ಲಿ ಬದುಕುವ ವಲಸೆ ಕಾರ್ಮಿಕ ವರ್ಗದವರಿಗೆ ಬಹಳಷ್ಟು ಅನಾನುಕೂಲವಾಗಿತ್ತು.
Video: