Connect with us

LATEST NEWS

ಬಚ್ಚಲು ಮನೆಯಲ್ಲಿ ಅಡಗಿದ್ದ ನಾಗರಹಾವು ರಕ್ಷಣೆ

ಬಚ್ಚಲು ಮನೆಯಲ್ಲಿ ಅಡಗಿದ್ದ ನಾಗರಹಾವು ರಕ್ಷಣೆ

ಪುತ್ತೂರು ಡಿಸೆಂಬರ್ 25: ಮನೆಯ ಬಚ್ಚಲು ಕೋಣೆಯಲ್ಲಿ ಅಡಗಿದ್ದ ನಾಗರ ಹಾವನ್ನು ರಕ್ಷಿಸಿ‌ ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು.

ಉಪ್ಪಿನಂಗಡಿಯ‌ ರಾಮನಗರ ನಿವಾಸಿ ರಮೇಶ್ ಭಂಡಾರಿ ಎಂಬವರಿಗೆ ಸೇರಿದ ಮನೆಯಲ್ಲಿ ನಾಗರ ಹಾವು‌ ಠಿಕಾಣಿ‌ ಹೂಡಿತ್ತು. ಹಾವಿನ ಚಲನವಲನಗಳನ್ನು‌ ಗಮನಿಸಿದ ಮನೆ ಮಂದಿ ಉಪ್ಪಿನಂಗಡಿಯ ಸ್ನೇಕ್ ಝಕರಿಯಾ ರನ್ನು ಸಂಪರ್ಕಿಸಿದ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಹಾವನ್ನು ಸುರಕ್ಷಿತವಾಗಿ ಹಿಡಿದು ಬೇರೆ ಕಾಡಿಗೆ ಬಿಡಲಾಗಿದೆ.

ಕಳೆದ ಕೆಲವು ದಿನಗಳಿಂದ ಈ‌ ಹಾವು ಮನೆ ಪರಿಸರದಲ್ಲಿ ಹರಿದಾಡುವ ಮೂಲಕ‌ ಮನೆ‌ ಮಂದಿಯ ಆತಂಕಕ್ಕೂ ಕಾರಣವಾಗಿತ್ತು.