KARNATAKA
ಹಾವು ಕಚ್ಚಿ ನಾಲ್ಕು ತಿಂಗಳ ಗರ್ಭಿಣಿ ಸಾವು…!!

ಮುದ್ದೇಬಿಹಾಳ ಅಕ್ಟೋಬರ್ 27: ವಿಷ ಪೂರಿತ ಹಾವು ಕಚ್ಚಿದ ಪರಿಣಾಮ ನಾಲ್ಕು ತಿಂಗಳ ಗರ್ಭೀಣಿ ಸಾವನಪ್ಪಿರುವ ಘಟನೆ ಕುಂಟೋಜಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ನಿರ್ಮಲಾ ಯಲ್ಲಪ್ಪ ಚಲವಾದಿ (25) ಎಂದು ಗುರುತಿಸಲಾಗಿದೆ. ಇವರು ಅಕ್ಟೋಬರ್ 25 ರಂದು ನಸುಕಿನ ಜಾವ 3 ಗಂಟೆಗೆ ಮನೆಯಲ್ಲಿ ಮಲಗಿದ ಸಮಯದಲ್ಲಿ ಹಾವು ಕಚ್ಚಿತ್ತು. ಹೆಚ್ಚಿನ ಚಿಕಿತ್ಸೆಗೆ ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
