LATEST NEWS
ಸ್ಮಾರ್ಟ್ ಸಿಟಿ ಒಂದು ಡೊಂಗಿ ಕಾನ್ಸೆಪ್ಟ್ – ಐವನ್ ಡಿಸೋಜಾ

ಸ್ಮಾರ್ಟ್ ಸಿಟಿ ಒಂದು ಡೊಂಗಿ ಕಾನ್ಸೆಪ್ಟ್ – ಐವನ್ ಡಿಸೋಜಾ
ಉಡುಪಿ ಅಕ್ಟೋಬರ್ 7: ಸ್ಮಾರ್ಟ್ ಸಿಟಿ ಒಂದು ಡೊಂಗಿ ಕಾನ್ಸೆಪ್ಟ್ ಇದರಿಂದಾಗಿ ಯಾವುದೇ ಅಭಿವೃದ್ದಿ ಸಾಧ್ಯವಿಲ್ಲ ಎಂದು , ಈ ಯೋಜನೆಯಿಂದ ಜನರಿಗೆ ಮೋಸ ಮಾಡುವುದೇ ಕೇಂದ್ರ ಸರಕಾರ ಉದ್ದೇಶ ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಆರೋಪಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಮಾತನಾಡಿದ ಅವರು ಕಸಾಯಿಖಾನೆಗೆ ಅನುದಾನ ಕೊಟ್ಟಿದ್ದು ಕೇಂದ್ರ ಸರ್ಕಾರ, ಕೇಂದ್ರ ಸರ್ಕಾರದ ನೀತಿ ಪ್ರಕಾರ ಹಣ ಮಂಜೂರು ಮಾಡಲಾಗಿದ್ದು ಇದರಲ್ಲಿ ರಾಜ್ಯ ಸರಕಾರದ ಪಾತ್ರ ಇಲ್ಲ ಎಂದು ಹೇಳಿದರು.

ಸ್ಮಾರ್ಟ್ ಸಿಟಿ ಘೋಷಣೆ ಮಾಡಿದ್ದು ಕೇಂದ್ರ ಸರ್ಕಾರ, ಅದರ ಬೋರ್ಡ್ ಡೈರೆಕ್ಟರ್ ಗಳು ಕೇಂದ್ರದವರು ಈ ಕುರಿತಂತೆ ಸಂಸದ ನಳಿನ್ ಕುಮಾರ್ ಇದಕ್ಕೆ ಉತ್ತರ ಕೊಡಬೇಕು ಎಂದು ಹೇಳಿದರು.ಸ್ಮಾರ್ಟ್ ಸಿಟಿ ಒಂದು ಕಂಪೆನಿ ರೀತಿಯಾಗಿದ್ದು, ಇದು ಜನರಿಗಾಗಿ ಇರುವ ಕಂಪನಿ ಅಲ್ಲ ಎಂಗು ಐವನ್ ಡಿಸೋಜ ಆರೋಪಿಸಿದ್ದಾರೆ.