ವಿದ್ಯುತ್ ಶಾಕ್ ಗೆ ಯುವಕನೋರ್ವ ಬಲಿ

ಸುಳ್ಯ ಅಕ್ಟೋಬರ್ 8: ವಿದ್ಯುತ್ ಶಾಕ್ ನಿಂದ ಯುವಕನೋರ್ವ ಮೃತಪಟ್ಟ ಘಟನೆ ಸುಳ್ಯದ ಗಾಂಧಿನಗರ ಗುರುಂಪು ಎಂಬಲ್ಲಿ ನಡೆದಿದೆ.
ದುಗಲಡ್ಕದ ನಾಗರಾಜ್ ಕಂದಡ್ಕ (೧೮) ಮೃತ ಯುವಕ ಎಂದು ಗುರುತಿಸಲಾಗಿದ್ದು, ಈತ ಇಂಡಸ್ಟ್ರೀಯಲ್‌ನಲ್ಲಿ ಉದ್ಯೋಗಿಯಾಗಿದ್ದರು. ವಿದ್ಯುತ್ ಗೆ ಸಂಬಂಧಪಟ್ಟ ಕೆಲಸ ಮಾಡುವ ಸಂದರ್ಭ ವಿದ್ಯುತ್ ಕನೆಕ್ಷನ್ ಮಾಡುವ ವೇಳೆ ಶಾಕ್ ಹೊಡೆದಿದ್ದು, ವಿದ್ಯುತ್ ಶಾಕ್ ನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ೮ ತಿಂಗಳ ಹಿಂದೆಯಷ್ಟೆ ಇಂಡಸ್ಟ್ರೀಗೆ ಕೆಲಸಕ್ಕೆ ಸೇರಿಕೊಂಡಿದ್ದ.

2 Shares

Facebook Comments

comments