KARNATAKA
ಚಾಮರಾಜನಗರ – ಲಘು ವಿಮಾನ ಪತನ – ಪೈಲೆಟ್ ಸೇಫ್
ಚಾಮರಾಜನಗರ ಜೂನ್ 1: ಲಘು ವಿಮಾನವೊಂದು ಪತನಗೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಭೋಗಪುರ ಬಳಿ ನಡೆದಿದೆ.
ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಜೆಟ್ ವಿಮಾನ ಪತನಗೊಂಡು, ಹೊತ್ತಿ ಉರಿದಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್ಗಳು ಪ್ಯಾರಾಚೂಟ್ ಬಳಸಿ ವಿಮಾನದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆಕಾಶದಲ್ಲಿ ತರಬೇತಿ ನೀಡುತ್ತಿದ್ದ ವೇಳೆ ವಿಮಾನ ಪತನಗೊಂಡಿದೆ. ಪುರುಷ ಪೈಲಟ್ ತೇಜಪಾಲ್ (43) ಮಹಿಳೆ ಪೈಲಟ್ ಭೂಮಿಕಾಗೆ ತರಬೇತಿ ನೀಡುತ್ತಿದ್ದರು. ಈ ವೇಳೆ ಆಕಾಶದಲ್ಲೇ ವಿಮಾನ ಪತನಗೊಂಡಿದೆ. ಕೂಡಲೇ ಎಚ್ಚೆತ್ತುಕೊಂಡ ಪುರುಷ ಮತ್ತು ಮಹಿಳಾ ತರಬೇತಿ ಪೈಲಟ್ ಕೂಡಲೇ ಪ್ಯಾರಾಚೂಟ್ ಮೂಲಕ ತಮ್ಮ ಜೀವ ಉಳಿಸಿಕೊಂಡಿದ್ದಾರೆ.
ಹೀಗಾಗಿ ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಬೆಂಗಳೂರಿನ ಹೆಚ್ಎಎಲ್ ಏರ್ಪೋರ್ಟ್ನಿಂದ ತೆರಳಿದ್ದ ವಿಮಾನ, ಭೋಗಪುರ ಬಳಿ ಪತಗೊಂಡಿದೆ. ಇನ್ನು ವಿಮಾನ ಛಿದ್ರ ಛಿದ್ರವಾಗಿದ್ದು, ಅದರ ಬಿಡಿ ಭಾಗಗಗಳು ಎಲ್ಲೆಂದರಲ್ಲಿ ಬಿದ್ದಿವೆ. ಅತ್ತ ನೆಲಕ್ಕೆ ಬಿದ್ದ ವಿಮಾನ ನುಜ್ಜು ನುಜ್ಜಾಗಿ ತುಂಡರಿಸಿ ಬಿದ್ದಿವೆ. ಪೈಲೆಟ್ಗಳನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಘಟನಾ ಸ್ಥಳಕ್ಕೆ ಸಂತೆಮರಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
You must be logged in to post a comment Login