DAKSHINA KANNADA
ಸ್ಕಿಲ್ ಗೇಮ್ ಅಡ್ಡೆ ಮೇಲೆ ದಾಳಿ – 51 ಜನ ವಶಕ್ಕೆ

ಸ್ಕಿಲ್ ಗೇಮ್ ಅಡ್ಡೆ ಮೇಲೆ ದಾಳಿ – 51 ಜನ ವಶಕ್ಕೆ
ಪುತ್ತೂರು ಜೂನ್ 19: ಸ್ಕಿಲ್ ಗೇಮ್ ಹೆಸರಿನಲ್ಲಿ ಜುಗಾರಿ ನಡೆಸುತ್ತಿದ್ದ ಕೇಂದ್ರವೊಂದಕ್ಕೆ ಪೋಲೀಸರು ತಡರಾತ್ರಿ ದಾಳಿ ನಡೆಸಿ ಕೇಂದ್ರದ ಸಿಬ್ಬಂದಿ ಸೇರಿದಂತೆ 51 ಜನರನ್ನು ವಶಕ್ಕೆ ಪಡೆದಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಈ ಕೇಂದ್ರ ಪುತ್ತೂರಿನ ಬೊಳುವಾರಿನಲ್ಲಿ ಕಾರ್ಯಾಚರಿಸುತ್ತಿತ್ತು. ಹೈಕೋರ್ಟ್ ನ ಆದೇಶವಿದೆ ಎನ್ನುವ ದಾಖಲೆಯನ್ನು ತೋರಿಸಿ ಈ ಕೇಂದ್ರದಲ್ಲಿ ರಾಜಾರೋಷವಾಗಿ ಜುಗಾರಿ ನಡೆಯುತ್ತಿತ್ತು. ಈ ವಿಚಾರವಾಗಿ ಹಿಂದೂ ಸಂಘಟನೆಗಳು ಪುತ್ತೂರು ಡಿವೈಎಸ್ಪಿ ಅವರನ್ನು ಸಂಪರ್ಕಿಸಿ ಕೇಂದ್ರವನ್ನು ಮುಚ್ಚುವಂತೆ ಮನವಿ ನೀಡಿತ್ತು. ಅಲ್ಲದೆ ಪೋಲೀಸರು ಈ ಸ್ಕಿಲ್ ಗೇಮ್ ಕೇಂದ್ರವನ್ನು ಮುಚ್ಚದೇ ಹೋದಲ್ಲಿ ಸಂಘಟನೆಗಳು ದಾಳಿ ನಡೆಸಿ ಮುಚ್ಚ್ಲಿಸಲಿವೆ ಎನ್ನುವ ಎಚ್ಚರಿಕೆಯನ್ನೂ ನೀಡಿತ್ತು.

ಈ ಹಿನ್ನಲೆಯಲ್ಲಿ ಪುತ್ತೂರು ನಗರ ಪೋಲೀಸರು ದಾಳಿ ನಡೆಸಿ ಕೇಂದ್ರದೊಳಗಿದ್ದ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಂದೆಯೂ ಪುತ್ತೂರು ಎಸೈ ಒಬ್ಬರು ಈ ಕೇಂದ್ರಕ್ಕೆ ದಾಳಿ ನಡೆಸಿ ಐವರನ್ನು ಠಾಣೆಗೆ ಕರೆದು ತಂದಿದ್ದರು. ಆದರೆ ಠಾಣೆ ತಲುಪುವ ಮೊದಲೇ ಕರೆದು ತಂದ ಐವರನ್ನು ಪೋಲೀಸ್ ಜೀಪ್ ನಲ್ಲೇ ಅಡ್ಡೆ ತನಕ ತಲುಪಿಸುವಷ್ಟು ಒತ್ತಡವೂ ಬಂದಿತ್ತು.