LATEST NEWS
ಕಾರಿಗೆ ಬೈಕ್ ಡಿಕ್ಕಿಯಾಗಿ ಸಿನಿಮೀಯ ರೀತಿಯಲ್ಲಿ ಪಾರಾದ ಬೈಕ್ ಸವಾರ
ಕಾರಿಗೆ ಬೈಕ್ ಡಿಕ್ಕಿಯಾಗಿ ಸಿನಿಮೀಯ ರೀತಿಯಲ್ಲಿ ಪಾರಾದ ಬೈಕ್ ಸವಾರ
ಮಂಗಳೂರು ಜೂನ್ 19: ಕಾರಿಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸಿನಿಮೀಯ ರೀತಿಯಲ್ಲಿ ಕಾರಿನ ಮೇಲ್ಬಾಗದಿಂದ ರಸ್ತೆ ಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಬೋಂದೆಲ್ ಬಳಿಯ ಚರ್ಚ್ ಮುಂಭಾಗದಲ್ಲಿ ಈ ಘಟನೆ ನಡೆದಿದೆ. ಬೈಕ್ ಸವಾರ ಏರ್ಪೋರ್ಟ್ ಕಡೆಗೆ ತೆರಳುತ್ತಿದ್ದ ಅತಿ ವೇಗದಿಂದ ತೆರಳುತ್ತಿದ್ದ ವೇಳೆ, ಕಾರಿನ ಚಾಲಕ ಚರ್ಚ್ ಮುಂಭಾಗದಲ್ಲಿ ಯು ಟರ್ನ್ ತೆಗೆದಿದ್ದಾನೆ. ಬೈಕ್ ನೇರವಾಗಿ ಕಾರಿಗೆ ಬಡಿದು, ಸವಾರ ಕಾರಿನ ಮೇಲ್ಭಾಗದಿಂದ ಪಲ್ಟಿಯಾಗಿ ರಸ್ತೆಗೆ ಬಿದ್ದಿದ್ದಾನೆ.
ಆದರೆ, ಹೆಲ್ಮೆಟ್ ಹಾಕಿದ್ದರಿಂದ ಬೈಕ್ ಸವಾರಿ ಮಾಡುತ್ತಿದ್ದ ಯುವಕ ಅಪಾಯದಿಂದ ಪಾರಾಗಿದ್ದಾನೆ. ಅಪಘಾತದ ದೃಶ್ಯ ಕಟ್ಟಡವೊಂದರ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಿನಿಮೀಯ ರೀತಿಯಲ್ಲಿ ನಡೆದಂತಿದೆ.
You must be logged in to post a comment Login