Connect with us

LATEST NEWS

ಹೋಳಿ ಪಾರ್ಟಿ ಮೇಲೆ ದಾಳಿ – 6 ಮಂದಿ ಬಜರಂಗದಳ ಕಾರ್ಯಕರ್ತರು ಪೊಲೀಸ್ ವಶಕ್ಕೆ

ಮಂಗಳೂರು ಮಾರ್ಚ್ 26: ನಗರದ ಮರೋಳಿ ಎಂಬಲ್ಲಿ ಯುವಕ ಯುವತಿಯರು ಹೋಳಿ ಆಚರಣೆ ನಡೆಸುತ್ತಿದ್ದ ವೇಳೆ ಬಜರಂಗದಳದ ಕಾರ್ಯಕರ್ತರು ಅಡ್ಡಿ ಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಬಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಗಣೇಶ್ ಅತ್ತಾವರ, ಜೈ ಪ್ರಶಾಂತ್, ಬಾಲಚಂದರ್, ಅಕ್ಷಯ್, ಚಿರಾಗ್ ಮತ್ತು ಮಿಥುನ್ ಎಂದು ಗುರುತಿಸಲಾಗಿದೆ.


ಮರೋಳಿಯ ‘ಸೂರ್ಯ ವುಡ್ಸ್ ‘ನಲ್ಲಿ ಅರ್ಜುನ್ ಎಂಬವರು ಹೋಳಿ ಆಚರಣೆಗೆ ಅನುಮತಿ ಪಡೆದಿದ್ದರು. ಭಾನುವಾರ ಮಧ್ಯಾಹ್ನ ಕೆಲ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಹೋಳಿ ಆಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಬಜರಂಗದಳದವರು ದಾಳಿ ನಡೆಸಿ ಅಡ್ಡಿಪಡಿಸಿದರು. ಕಾರ್ಯಕ್ರಮದ ಕುರಿತು ಅಳವಡಿಸಿದ್ದ ಬ್ಯಾನರ್ ಗಳನ್ನು ಹರಿದು ಹಾಕಿದರು. ವಿದ್ಯಾರ್ಥಿಗಳು ತುಂಡುಡುಗೆ ತೊಟ್ಟಿದ್ದಕ್ಕೆ ಹಾಗೂ ಧ್ವನಿವರ್ಧಕ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕಾರ್ಯಕ್ರಮ ಆಯೋಜಕರು ಹಾಗೂ ಬಜರಂಗದಳ ಕಾರ್ಯಕರ್ತರ ನಡುವೆ ಮಾತಿನ ಚಕ್ಕಮಕಿಯು ನಡೆಯಿತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

Advertisement
Click to comment

You must be logged in to post a comment Login

Leave a Reply