Connect with us

    FILM

    ವಾರಾಣಸಿಯ ಹೋಟೆಲ್‌ ನಲ್ಲಿ ನೇಣಿಗೆ ಶರಣಾದ ಭೋಜಪುರಿ ನಟಿ ಆಕಾಂಕ್ಷಾ ದುಬೆ

    ವಾರಣಾಸಿ ಮಾರ್ಚ್ 26: ಭೋಜಪುರಿ ಚಿತ್ರರಂಗದ ಜನಪ್ರಿಯ ನಟಿ ಆಕಾಂಕ್ಷಾ ದುಬೆ ವಾರಣಾಸಿ ಹೋಟೆಲ್ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ,


    25 ವರ್ಷದ ಈ ನಟಿ ತಮ್ಮ ಮುಂದಿನ ಚಿತ್ರಕ್ಕಾಗಿ ವಾರಣಾಸಿಯಲ್ಲಿ ಶೂಟಿಂಗ್‌ಗೆ ತೆರಳಿದ್ದರು. ತಮ್ಮ ಪಾಲಿನ ಶೂಟಿಂಗ್ ಮುಗಿಸಿ ವಾರಾಣಸಿಯ ಸಾರಾನಾಥ್ ಹೋಟೆಲ್‌ನಲ್ಲಿ ತಂಗಿದ್ದರು ಎಂದು ಹೇಳಲಾಗಿದೆ.


    ಭೋಜಪುರಿ ಚಿತ್ರರಂಗದ ಕನಸಿನ ರಾಣಿಯಂದು ಗುರುತಿಸಿಕೊಂಡಿದ್ದ ಮಿರ್ಜಾಪುರ್ ಮೂಲದ ಆಕಾಂಕ್ಷಾ ಅವರು ಐಎಎಸ್ ಅಧಿಕಾರಿ ಆಗಬೇಕೆಂದುಕೊಂಡು ಮುಂಬೈ ಸೇರಿದ್ದರು. ಆದರೆ, ಅಲ್ಲಿಂದ ಭೋಜಪುರಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಹೆಸರು ಮಾಡಿದ್ದರು.
    ಭೋಜಪುರಿಯ ಮೇರಿ ಜಂಗ್, ಮೇರಿ ಪೈಸಲಾ, ಮುಜಸೆ ಶಾದಿ ಕರೋಗೆ (ಭೋಜಪುರಿ), ವೀರೋನ್ ಕಿ ವೀರ, ಕಸಮ್ ಪೈದಾ ಕರನೇ ಕಿ 2 ಸಿನಿಮಾಗಳಲ್ಲಿ ಮಿಂಚಿದ್ದಲ್ಲದೇ ಆಕಾಂಕ್ಷಾ ಹಲವು ಭೋಜಪುರಿ ಮ್ಯುಸಿಕ್ ಅಲ್ಬಂಗಳಲ್ಲಿ ನಟಿಸಿ ಗಮನ ಸೆಳೆದಿದ್ದರು.


    ಆಕಾಂಕ್ಷಾ ಸಾವಿನ ಬಗ್ಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವಾರಾಣಸಿ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply