Connect with us

    BELTHANGADI

    ಪಥ್ಯಾಹಾರದಲ್ಲಿ ನಾನ್ ವೆಜ್ ಪ್ರಿಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

    ಪಥ್ಯಾಹಾರದಲ್ಲಿ ನಾನ್ ವೆಜ್ ಪ್ರಿಯ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

    ಬೆಳ್ತಂಗಡಿ ಜೂನ್ 20: ಸದಾ ನಾಟಿ ಕೋಳಿ, ಮಟನ್ ಸಾರನ್ನೇ ನೆಚ್ಚಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಈಗ ಪಥ್ಯಾಹಾರದಲ್ಲಿ ತೊಡಗಿದ್ದಾರೆ. ಪಾಯ ಸೂಪ್ ಮೂಲಕವೇ ದಿನಚರಿ ಆರಂಭಿಸುವ ಸಿದ್ದರಾಮಯ್ಯ ಹೆಚ್ಚಾಗಿ ಮಂಸಹಾರಕ್ಕೆ ಹೆಚ್ಚೆನ ಒಲವು ತೋರುತ್ತಿದ್ದರು. ಆದರೆ ಈಗ ಆಪ್ಪಟ ಸಸ್ಯಹಾರಿ 12 ದಿನಗಳ ಪ್ರಕೃತಿ ಚಿಕಿತ್ಸೆಗಾಗಿ ಧರ್ಮಸ್ಥಳದ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾಲಯಕ್ಕೆ ದಾಖಲಾಗಿದ್ದಾರೆ.

    12 ದಿನಗಳ ಪ್ರಕೃತಿ ಚಿಕಿತ್ಸೆಗಾಗಿ ಧರ್ಮಸ್ಥಳದ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾಲಯಕ್ಕೆ ದಾಖಲಾಗಿರುವ ಸಿದ್ದರಾಮಯ್ಯ ಅಲ್ಲಿ ಎರಡು ದಿನಗಳನ್ನು ಕಳೆದಿದ್ದಾರೆ. ಸದಾ ತಿರುಗಾಟದಿಂದ ಶುಗರ್, ಬಿಪಿ ಹೆಚ್ಚಿಸಿಕೊಂಡಿದ್ದ 69ರ ಹರೆಯದ ಸಿದ್ದುಗೆ ಈಗ ಮಾಂಸಾಹಾರ ಸಂಪೂರ್ಣ ವರ್ಜ್ಯ.

    ಚಿಕಿತ್ಸಾ ಕೇಂದ್ರದಲ್ಲಿ ಅವರ ದಿನಚರಿ ಆರಂಭ ವಾಗುವುದೇ ಬೆಳ್ಳಂಬೆಳಿಗ್ಗೆ 6 ಗಂಟೆಗೆ . ಮುಂಜಾನೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿದ ಬಳಕ ಯೋಗ, ಪ್ರಾಣಾಯಾಮ, 9 ಗಂಟೆಗೆ ಸರಿಯಾಗಿ ರಾಗಿ ಗಂಜಿ ಸೇವಿಸುತ್ತಾರೆ.

    11 ಗಂಟೆಗೆ ಹಸಿ ತರಕಾರಿಯೇ ಸಿದ್ದರಾಮಯ್ಯ ಅವರಿಗೆ ಮಧ್ಯಾಹ್ನದ ಊಟ. ಹಸಿ ತರಕಾರಿ, ಮೊಳಕೆ ಬಂದ ಕಾಳು, ಸೌತೆಕಾಯಿ, ಕ್ಯಾರೆಟ್, ಬಿಟ್ರೂಟ್ ನ ಸಲಾಡ್ ಮತ್ತು ಮಜ್ಜಿಗೆ ಮಾತ್ರ. ಸಿದ್ದರಾಮಯ್ಯ ಸೇವಿಸುವ ಯಾವ ಅಹಾರದಲ್ಲೂ ಉಪ್ಪು, ಹುಳಿ, ಖಾರ ಇಲ್ಲ. ಅನ್ನವೂ ಇಲ್ಲದ ಊಟ.

    ಸಂಜೆ ಸರಿಸುಮಾರು 6.30ಕ್ಕೆ ರಾತ್ರಿಯ ಊಟ. ಬೇಯಿಸಿದ ತರಕಾರಿ, ಎರಡು ಚಪಾತಿ, ಮಜ್ಜಿಗೆ, ಪಪ್ಪಾಯಿ ಅಷ್ಟನ್ನೇ ಸಿದ್ದು ಅವರಿಗೆ ಸೇವಿಸಲು ಅವಕಾಶ. ಇದರ ನಡುವೆ, ವಿಶ್ರಾಂತಿ, ಜಲ ಚಿಕಿತ್ಸೆ, ಹೈಡ್ರೋಥೆರಪಿ, ಮಸಾಜ್ ಇರುತ್ತದೆ. ಈ ಚಿಕಿತ್ಸೆಯ ಸಂದರ್ಭದಲ್ಲಿ ಶಾಂತಿಧಾಮ ದಿಂದ ಹೊರಹೋಗುವಂತಿಲ್ಲ. ಯಾರನ್ನೂ ಭೇಟಿಯಾಗುವಂತಿಲ್ಲ. ರಾತ್ರಿ ಹತ್ತು ಗಂಟೆಗೆ ನಿದ್ದೆ.

    ಸದಾ ರಾಜಕೀಯ ತಂತ್ರಗಾರಿಗೆ , ಆಡಳಿತಾತ್ಮಕ ಒತ್ತಡ, ವಿರೋಧ ಪಕ್ಷಕ್ಕೆ ತಿರುಗೇಟು ನೀಡುವ ಚಿಂತನೆ, ಸದಾ ನೂರಾರು ಬೆಂಬಲಿಗರ ನಡುವೆ ಇದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಸಂಪೂರ್ಣ ಬದಲಾಗಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *