Connect with us

    LATEST NEWS

    ಕರಾವಳಿಯಲ್ಲಿ ನಾನ್ ಸ್ಟಾಪ್ ಆಗಿ ಸುರಿಯುತ್ತಿರುವ ಮಳೆ

    ಕರಾವಳಿಯಲ್ಲಿ ನಾನ್ ಸ್ಟಾಪ್ ಆಗಿ ಸುರಿಯುತ್ತಿರುವ ಮಳೆ

    ಉಡುಪಿ ಜೂನ್ 20: ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಜೂನ್ 24 ರವರೆಗೆ ಭಾರಿ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

    ಈ ಜಿಲ್ಲೆಗಳ ಕಲೆ ಪ್ರದೇಶಗಳಲ್ಲಿ ಸುಮಾರು 64 ಮಿಲಿ ಮೀಟರ್ ನಿಂದ 115 ಮಿಲಿ ಮೀಟರ್ ವರೆಗೂ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

    ಉಡುಪಿ ಜಿಲ್ಲೆಯಲ್ಲಿ ಕಳೆದ 24 ಘಂಟೆ ಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ರೈತಾಪಿ ವರ್ಗ ಕೃಷಿ ಚಟುವಟಿಕೆ ಆರಂಬಿಸಿದ್ದು ನಿರಂತರ ಮಳೆ ಸಹಕಾರಿಯಾದರೂ ಅತಿವೃಷ್ಠಿಯ ಹಾನಿ ಬಾಧಿಸಿದೆ.

    ಸತತ ಸುರಿಯುತ್ತಿರುವ ಮಳೆಯಿಂದ ಜನಜೀವನ ಕೆಲೆವೆಡೆ ಅಸ್ಥವ್ಯಸ್ಥಗೊಂಡಿದೆ. ನಿನ್ನೆ ರಾತ್ರಿ ಬಿಡುವಿಲ್ಲದೆ ಸುರಿದ ಮಳೆ ಯಿಂದ ಪಶ್ಚಿಮ ಘಟ್ಟದ ನದಿ ಜಲಪಾತಗಳು ಮೈದುಂಬಿ ಹರಿಯುತ್ತಿವೆ.

    ಈ ಬಾರಿ ಉಡುಪಿ ನಗರ ಸೇರಿದಂತೆ ಜಿಲ್ಲೆಯ ಕಾರ್ಕಳ , ಬೈಂದೂರು , ಕಾಪು ಕೊಲ್ಲೂರು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ ಜಿಲ್ಲಾಡಳಿತ ಸಕಲ ಮುಂಜಾಗ್ರತಾ ಕ್ರಮ ಕೈಗೊಂಡಿದೆ

    Share Information
    Advertisement
    Click to comment

    You must be logged in to post a comment Login

    Leave a Reply